Kerala Local Body Election Result: ಬಿಜೆಪಿಯ ಸೋನಿಯಾ ಗಾಂಧಿಗೆ ಸೋಲು
Update: 2025-12-13 12:34 IST
Photo credit: mediaoneonline.com
ತಿರುವನಂತಪುರಂ: ಕೇರಳದ ಮುನ್ನಾರ್ ಪಂಚಾಯತ್ 16ನೇ ವಾರ್ಡ್‌ನಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಸೋನಿಯಾ ಗಾಂಧಿ ಎಲ್‌ಡಿಎಫ್ ಅಭ್ಯರ್ಥಿ ಎದುರು ಸೋಲನುಭವಿಸಿದ್ದಾರೆ.
ಕೇರಳದ ಗುಡ್ಡಗಾಡು ಪ್ರದೇಶವಾದ ಮುನ್ನಾರ್ ನ ನಲ್ಲತನ್ನಿ ವಾರ್ಡ್ ನಿಂದ ಸೋನಿಯಾ ಗಾಂಧಿ ಎಂಬ ಹೆಸರಿನ ಮಹಿಳೆಯನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತ್ತು. ಸೋನಿಯಾ ಗಾಂಧಿ ಎಂಬ ಹೆಸರಿನ ಕಾರಣಕ್ಕೆ ಅವರು ಸುದ್ದಿಯಾಗಿದ್ದರು.
ನಲ್ಲತನ್ನಿ ವಾರ್ಡ್ ನಲ್ಲಿ ಎಲ್‌ಡಿಎಫ್ ಅಭ್ಯರ್ಥಿ ವಲರಮತಿ ಗೆಲುವನ್ನು ಸಾಧಿಸಿದ್ದಾರೆ.
ಸೋನಿಯಾ ಗಾಂಧಿ ಕಾಂಗ್ರೆಸ್ ನಾಯಕ ದುರೈರಾಜ್ ಅವರ ಪುತ್ರಿ. ದುರೈರಾಜ್ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ದೊಡ್ಡ ಅಭಿಮಾನಿಯಾಗಿದ್ದರು. ಈ ಕಾರಣಕ್ಕೆ ಅವರು ತಮ್ಮ ಪುತ್ರಿಗೆ ಸೋನಿಯಾಗಾಂಧಿ ಎಂದು ಹೆಸರಿಟ್ಟಿದ್ದರು.
ಬಿಜೆಪಿ ಪಂಚಾಯತ್ ಪ್ರಧಾನ ಕಾರ್ಯದರ್ಶಿ ಸುಭಾಷ್ ಅವರನ್ನು ಮದುವೆಯಾದ ನಂತರ ಸೋನಿಯಾ ಗಾಂಧಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.