ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರ ಚೆನ್ನೈ ನಿವಾಸಕ್ಕೆ ಬಾಂಬ್ ಬೆದರಿಕೆ
ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ (Photo: PTI)
ಚೆನ್ನೈ: ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರ ಚೆನ್ನೈ ನಿವಾಸಕ್ಕೆ ಬಾಂಬ್ ಬೆದರಿಕೆ ಬಂದಿದೆ. ಈ ಕುರಿತ ಪತ್ರವನ್ನು ತಮಿಳುನಾಡು ಡಿಜಿಪಿ ಕಚೇರಿಗೆ ಇಮೇಲ್ ಮೂಲಕ ಕಳುಹಿಸಲಾಗಿದೆ.
ಸ್ಥಳಕ್ಕೆ ತಕ್ಷಣವೇ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ತಂಡಗಳು ತೆರಳಿ ಶೋಧ ನಡೆಸಿತು. ಈ ಬೆದರಿಕೆ ಸುಳ್ಳೆಂದು ಪೊಲೀಸ್ ಅಧಿಕಾರಿಗಳು ಘೋಷಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ಈ ಇಮೇಲ್ ಬಂದಿದ್ದು, ಸ್ಫೋಟಕ ಸಾಧನವನ್ನು ಮನೆಯಲ್ಲಿರಿಸಲಾಗಿದೆ ಎಂದು ಬೆದರಿಕೆ ಹಾಕಲಾಗಿತ್ತು. ಭದ್ರತಾ ತಂಡಗಳೊಂದಿಗೆ ಬಾಂಬ್ ಪತ್ತೆ ದಳ ಶೋಧ ನಡೆಸಿದ್ದು, ಪರಿಶೀಲನೆಯ ಬಳಿಕ ಯಾವುದೇ ಸ್ಫೋಟಕ ಸಾಧನ ಕಂಡುಬಂದಿಲ್ಲ ಎಂದು ತಿಳಿದು ಬಂದಿದೆ.
ತಹಶೀಲ್ದಾರ್ ಮತ್ತು ಡಿಜಿಪಿ ಕಚೇರಿಯ ಅಧಿಕಾರಿಗಳು ಇಮೇಲ್ ಮೂಲವನ್ನು ಪರಿಶೀಲಿಸುತ್ತಿದ್ದಾರೆ. ಬಾಂಬ್ ಬೆದರಿಕೆ ಹಾಕಿದ ವ್ಯಕ್ತಿಯನ್ನು ಪತ್ತೆಹಚ್ಚಲು ತನಿಖೆ ಕೈಗೊಳ್ಳಲಾಗಿದೆ.
ಕೆಲ ದಿನಗಳ ಹಿಂದೆ ಪ್ರಸಿದ್ಧ ಸಂಗೀತ ನಿರ್ದೇಶಕ ಇಳಯರಾಜ ಅವರ ಟಿ ನಗರ ಸ್ಟುಡಿಯೋ ಮತ್ತು ನಟ-ರಾಜಕಾರಣಿ ವಿಜಯ್ ಅವರ ನಿಲ್ಲಂಗರೆನಲ್ಲಿರುವ ನಿವಾಸಕ್ಕೂ ಬಾಂಬ್ ಬೆದರಿಕೆ ಬಂದಿತ್ತು. ತಪಾಸಣೆಯ ನಂತರ ಸುಳ್ಳು ಬೆದರಿಕೆ ಎಂದು ಪೊಲೀಸರು ಹೇಳಿದ್ದರು.