×
Ad

ಬಿಆರ್‌ಎಸ್‌ ಶಾಸಕ ಮಾಗಂಟಿ ಗೋಪಿನಾಥ್ ನಿಧನ

Update: 2025-06-08 13:26 IST

ಹೈದರಾಬಾದ್ : ಬಿಆರ್‌ಎಸ್‌ ಶಾಸಕ ಮಾಗಂಟಿ ಗೋಪಿನಾಥ್ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 

ಜೂನ್ 5ರಂದು ಹೃದಯಾಘಾತವಾಗಿದ್ದ ಮಾಗಂಟಿ ಗೋಪಿನಾಥ್(63) ಅವರನ್ನು ಎಐಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ರವಿವಾರ ಮುಂಜಾನೆ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಜುಬಿಲಿ ಹಿಲ್ಸ್ ಕ್ಷೇತ್ರದ ಶಾಸಕರಾಗಿರುವ ಗೋಪಿನಾಥ್, 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕ್ರಿಕೆಟಿಗ ಮುಹಮ್ಮದ್ ಅಝರುದ್ದೀನ್ ಅವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.

ಟಿಡಿಪಿ ಪಕ್ಷದಿಂದ ರಾಜಕೀಯ ಜೀವನ ಆರಂಭಿಸಿದ ಗೋಪಿನಾಥ್ ಅವರು ಪಕ್ಷದ ಹೈದರಾಬಾದ್ ಘಟಕದ ಅಧ್ಯಕ್ಷರಾಗಿದ್ದರು. 2014ರಲ್ಲಿ ಟಿಡಿಪಿ ಪಕ್ಷದಿಂದ ಜುಬ್ಲಿ ಹಿಲ್ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಆ ಬಳಿಕ 2016ರಲ್ಲಿ ಅವರು ಬಿಆರ್‌ಎಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. 2018ರಲ್ಲಿ ಉಪ ಚುನಾವಣೆಯಲ್ಲಿ ಬಿಆರ್‌ಎಸ್‌ ಪಕ್ಷದ ಮೂಲಕ ಗೆಲವು ಸಾಧಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News