×
Ad

ಪಾಕ್ ಶೆಲ್ ದಾಳಿಯಲ್ಲಿ ಹುತಾತ್ಮರಾದ ಬಿಎಸ್‌ಎಫ್ ಅಧಿಕಾರಿ ಮುಹಮ್ಮದ್ ಇಮ್ತಿಯಾಝ್‌ ಅಂತ್ಯಕ್ರಿಯೆ

Update: 2025-05-12 15:31 IST

PC : PTI 

ಹೊಸದಿಲ್ಲಿ: ಗಡಿಯಾಚಿನಿಂದ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಮೃತಪಟ್ಟಿದ್ದ ಗಡಿ ಭದ್ರತಾ ಪಡೆಯ ಸಬ್ ಇನ್ಸ್‌ಪೆಕ್ಟರ್ ಮುಹಮ್ಮದ್ ಇಮ್ತಿಯಾಝ್‌ರ ಅಂತ್ಯಕ್ರಿಯೆ ಸೋಮವಾರ ನೆರವೇರಿತು. ಈ ವೇಳೆ ರಾಷ್ಟ್ರೀಯ ಜನತಾ ದಳ ನಾಯಕ ತೇಜಸ್ವಿ ಯಾದವ್, ಸಚಿವ ಶ್ರವಣ್ ಕುಮಾರ್ ಸೇರಿದಂತೆ ಹಲವು ನಾಯಕರು ಹಾಗೂ ಕುಟುಂಬದ ಸದಸ್ಯರು ಹುತಾತ್ಮ ಅಧಿಕಾರಿಗೆ ಗೌರವ ನಮನ ಸಲ್ಲಿಸಿದರು.

ಮೇ 10ರಂದು ಜಮ್ಮು ಮತ್ತು ಕಾಶ್ಮೀರದ ಆರ್.ಎಸ್‌.ಪುರ ವಲಯದಲ್ಲಿ ಗಡಿಯಾಚೆಯಿಂದ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಮುಹಮ್ಮದ್ ಇಮ್ತಿಯಾಝ್‌ ಮೃತಪಟ್ಟಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಹುತಾತ್ಮ ಬಿಎಸ್‌ಎಫ್ ಅಧಿಕಾರಿ ಮುಹಮ್ಮದ್ ಇಮ್ತಿಯಾಝ್‌ರ ಪುತ್ರ, ನನ್ನ ತಂದೆ ತುಂಬಾ ಬಲಿಷ್ಠ ವ್ಯಕ್ತಿಯಾಗಿದ್ದರು ಹಾಗೂ ನನಗೆ ಅವರ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದು ಹೇಳಿದರು. "ನನ್ನ ತಂದೆ ಮೇ 10ರ ಮುಂಜಾನೆ 5.30ರ ವೇಳೆಗೆ ನನಗೆ ಕರೆ ಮಾಡಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ನಡೆದಿದ್ದ ಡ್ರೋನ್ ದಾಳಿಯಲ್ಲಿ ಅವರ ಬಲಗಾಲಿಗೆ ಗಂಭೀರ ಗಾಯವಾಗಿತ್ತು" ಎಂದು ಅವರು ಹೇಳಿದರು. "ಬೇರಾವ ಪುತ್ರನೂ ತನ್ನ ತಂದೆಯನ್ನು ಈ ರೀತಿ ಕಳೆದುಕೊಂಡ ನೋವನ್ನು ಅನುಭವಿಸದಿರುವಂತೆ ಸರಕಾರವು ಈ ದಾಳಿಗೆ ಶಕ್ತಿಶಾಲಿ ಪ್ರತ್ಯುತ್ತರ ನೀಡಬೇಕು" ಎಂದೂ ಅವರು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News