×
Ad

ಬಜೆಟ್ ಅಧಿವೇಶನದ ಜ.31ರಂದು ಆರಂಭ | ಫೆ.1ರಂದು ಕೇಂದ್ರ ಬಜೆಟ್ ಮಂಡನೆ

Update: 2025-01-17 22:53 IST

ನಿರ್ಮಲಾ ಸೀತಾರಾಮನ್ | PC : PTI 

ಹೊಸದಿಲ್ಲಿ : ಸಂಸತ್ನ ಮೊದಲನೇ ಹಂತದ ಬಜೆಟ್ ಅಧಿವೇಶನವು ಜನವರಿ 31ರಂದು ಆರಂಭಗೊಳ್ಳಲಿದ್ದು, ಫೆಬ್ರವರಿ 13ರವರೆಗೆ ನಡೆಯಲಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಎಂಟನೆ ಬಾರಿಗೆ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ.

ಜನವರಿ 31ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲೋಕಸಭಾ ಹಾಗೂ ರಾಜ್ಯಸಭಾದ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡುವ ಮೂಲಕ ಸಂಸತ್ ಅಧಿವೇಶನವು ಆರಂಭಗೊಳ್ಳಲಿದೆ. ಬಳಿಕ ಆರ್ಥಿಕ ಸಮೀಕ್ಷೆಯನ್ನು ಕೇಂದ್ರ ಸರಕಾರ ಮಂಡಿಸಲಿದೆ.

ಎರಡನೆ ಹಂತದ ಬಜೆಟ್ ಅಧಿವೇಶನವು ಮಾರ್ಚ್ 10ರಿಂದ ಎಪ್ರಿಲ್ 4ರವರೆಗೆ ನಡೆಯುವ ನಿರೀಕ್ಷೆಯಿದೆ. ರಾಷ್ಟ್ರಪತಿ ಭಾಷಣದ ಕುರಿತ ಧನ್ಯವಾದ ನಿರ್ಣಯದ ಕುರಿತು ನಡೆಯುವ ಚರ್ಚೆಯು ಪ್ರಧಾನಿ ಭಾಷಣದೊಂದಿಗೆ ಮುಕ್ತಾಯವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News