×
Ad

ಬಜೆಟ್ ನಲ್ಲಿ ನವೋದ್ಯಮಗಳಿಗೆ ನವೋತ್ಸಾಹ | 10,000 ಕೋಟಿ ರೂ.ನಿಧಿ ಘೋಷಣೆ

Update: 2025-02-01 20:31 IST

 ನಿರ್ಮಲಾ ಸೀತಾರಾಮನ್ | PTI  

ಹೊಸದಿಲ್ಲಿ: ದೇಶದಲ್ಲಿ ಸ್ಟಾರ್ಟ್‌ಅಪ್ ಅಥವಾ ನವೋದ್ಯಮಗಳ ಬೆಳವಣಿಗೆಯನ್ನು ಉತ್ತೇಜಿಸಲು ಪರ್ಯಾಯ ಹೂಡಿಕೆ ನಿಧಿ(ಎಐಎಫ್)ಗಳಿಗೆ ಬೆಂಬಲವಾಗಿ ವಿಸ್ತರಿತ ವ್ಯಾಪ್ತಿ ಮತ್ತು ಇನ್ನೂ 10,000 ಕೋಟಿ ರೂ.ಗಳ ಹೊಸ ಕೊಡುಗೆಯೊಂದಿಗೆ ನೂತನ ನಿಧಿ ಸಂಚಯ(ಫಂಡ್ ಆಫ್ ಫಂಡ್ಸ್) ವನ್ನು ಸ್ಥಾಪಿಸಲಾಗುವುದು ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ತನ್ನ ಬಜೆಟ್ ಭಾಷಣದಲ್ಲಿ ಪ್ರಕಟಿಸಿದರು.

ಮುಂದಿನ ಪೀಳಿಗೆಯ ನವೋದ್ಯಮಗಳ ವೇಗವರ್ಧಕವಾಗಿ ಡೀಪ್‌ಟೆಕ್ ಫಂಡ್ ಆಫ್ ಫಂಡ್ಸ್ ಬಗ್ಗೆಯೂ ಚಿಂತನೆ ನಡೆಸಲಾಗುವುದು ಎಂದೂ ಅವರು ಪ್ರಕಟಿಸಿದರು. ನವೋದ್ಯಮಗಳಿಗೆ ಆದಾಯ ತೆರಿಗೆ ಕಾಯ್ದೆಯ ಕಲಂ 80-ಐಎಸಿ ಅಡಿ ಒದಗಿಸಲಾಗಿರುವ ಸೌಲಭ್ಯವನ್ನು ಇನ್ನೂ ಐದು ವರ್ಷಗಳಿಗೆ ವಿಸ್ತರಿಸುವ ಇನ್ನೊಂದು ಮಹತ್ವದ ಪ್ರಸ್ತಾವವನ್ನೂ ಅವರು ತನ್ನ ಭಾಷಣದಲ್ಲಿ ಮಂಡಿಸಿದ್ದಾರೆ.

ಮಹಿಳೆಯರು,ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ವರ್ಗಗಳ ಮೊದಲ ಬಾರಿಯ ಉದ್ಯಮಿಗಳಿಗಾಗಿ ನೂತನ ಯೋಜನೆಯನ್ನು ಅರಂಭಿಸಲಾಗುವುದು. ಈ ಯೋಜನೆಯು ಮುಂದಿನ ಐದು ವರ್ಷಗಳಲ್ಲಿ ಎರಡು ಕೋಟಿ ರೂ.ವರೆಗೆ ಅವಧಿ ಸಾಲಗಳನ್ನು ಒದಗಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News