×
Ad

ಉತ್ತರ ಪ್ರದೇಶ | ಫರೂಕಾಬಾದ್ ನಲ್ಲಿ ಬುಲ್ಡೋಝರ್ ಕಾರ್ಯಾಚರಣೆ: ಪೊಲೀಸರೆದುರೇ ಅಧಿಕಾರಿಗಳನ್ನು ಥಳಿಸಿದ ಗ್ರಾಮಸ್ಥರು

Update: 2024-09-30 20:32 IST

Credit: PTI photo

ಫರೂಕಾಬಾದ್ : ಗ್ರಾಮದಲ್ಲಿ ಬುಲ್ಡೋಝರ್ ಕಾರ್ಯಾಚರಣೆ ನಡೆಸಿದ್ದರಿಂದ ಕುಪಿತಗೊಂಡ ಗ್ರಾಮಸ್ಥರು, ಇಬ್ಬರು ಕಂದಾಯಾಧಿಕಾರಿಗಳನ್ನು ಪೊಲೀಸರೆದುರೇ ಥಳಿಸಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಈ ಘಟನೆಯು ಉಖ್ರಾ ಗ್ರಾಮದಲ್ಲಿ ನಡೆದಿದ್ದು, ಶನಿವಾರ ಜಿಲ್ಲಾಡಳಿತದ ತಂಡವೊಂದು ಸರಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದ್ದ ಹಲವಾರು ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿತು.

ಸೋಮವಾರ ಗ್ರಾಮಕ್ಕೆ ಆಗಮಿಸಿದ ಕೆಲವು ಬಿಜೆಪಿ ನಾಯಕರು, ವೃತ್ತಾಧಿಕಾರಿ ಅರುಣ್ ಕುಮಾರ್, ಠಾಣಾಧಿಕಾರಿ ಬಾಲರಾಜ್ ಭಾಟಿ ಸೇರಿದಂತೆ ಜನರೊಂದಿಗೆ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಕುಪಿತಗೊಂಡ ಗ್ರಾಮಸ್ಥರು, ಕಂದಾಯಾಧಿಕಾರಿಗಳಾದ ಪ್ರತಾಪ್ ಸಿಂಗ್ ಮತ್ತು ಸೌರಭ್ ಪಾಂಡೆ ಮೇಲೆ ಹಲ್ಲೆ ನಡೆಸಿದರು.

ಆದರೆ, ಸ್ಥಳದಲ್ಲಿಯೇ ಇದ್ದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.

ಸುದ್ದಿ ತಿಳಿಯುತ್ತಿದ್ದಂತೆಯೆ, ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಳ್ಳಬೇಕು ಎಂದು ಕಂದಾಯಾಧಿಕಾರಿಗಳ ಲೇಖಪಾಲ್ ಸಂಘವು ನವಾಬ್ ಗಂಜ್ ಪೊಲೀಸ್ ಠಾಣೆ ಎದುರು ಧರಣಿ ನಡೆಸಿತು ಎಂದು ತಿಳಿದು ಬಂದಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News