×
Ad

ಇಂಗ್ಲೆಂಡ್‌ನಲ್ಲಿ ಕಾರು ಅಪಘಾತ : ಹೈದರಾಬಾದ್ ಮೂಲದ ಇಬ್ಬರು ವಿದ್ಯಾರ್ಥಿಗಳು ಮೃತ್ಯು

Update: 2025-09-03 10:17 IST

Photo | NDTV

ಹೈದರಾಬಾದ್: ಇಂಗ್ಲೆಂಡ್‌ನ ಎಸೆಕ್ಸ್‌ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಹೈದರಾಬಾದ್ ಮೂಲದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಐವರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ಮೃತರನ್ನು ತೆಲಂಗಾಣದ ನಡರ್‌ಗುಲ್‌ ನಿವಾಸಿ ಚೈತನ್ಯ ತಾರೆ (23) ಮತ್ತು ಬೋಡುಪ್ಪಲ್‌ ನಿವಾಸಿ ರಿಶಿತೇಜ ರಾಪು (21) ಎಂದು ಗುರುತಿಸಲಾಗಿದೆ. ಇವರಿಬ್ಬರು ಕೆಲ ತಿಂಗಳ ಹಿಂದೆಯಷ್ಟೇ ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್‌ಗೆ ತೆರಳಿದ್ದರು.

ಹೈದರಾಬಾದ್ ಮೂಲದ ಒಂಬತ್ತು ಭಾರತೀಯ ವಿದ್ಯಾರ್ಥಿಗಳು ಗಣೇಶ ವಿಗ್ರಹ ವಿಸರ್ಜನೆಯಲ್ಲಿ ಭಾಗವಹಿಸಿ ಸೋಮವಾರ ಮುಂಜಾನೆ ಎರಡು ಕಾರುಗಳಲ್ಲಿ ತಮ್ಮ ಮನೆಗೆ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ.

"ಸೋಮವಾರ ಮುಂಜಾನೆ 4.15ರ ವೇಳೆ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಅಪಾಯಕಾರಿ ಚಾಲನೆಯ ಆರೋಪದಲ್ಲಿ ಇಬ್ಬರು ಚಾಲಕರನ್ನು ಬಂಧಿಸಲಾಗಿದೆ” ಎಂದು ಎಸೆಕ್ಸ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News