×
Ad

ಲೈಂಗಿಕ ಕಿರುಕುಳ ಪ್ರಕರಣ | ಜಾನಿ ಮಾಸ್ಟರ್‌ಗೆ ಜಾಮೀನು ಬಿಡುಗಡೆ

Update: 2024-10-24 21:29 IST

ನೃತ್ಯ ನಿರ್ದೇಶಕ ಜಾನಿ ಮಾಸ್ಟರ್‌ | PC : Instagram/ Jani Master

ಹೈದರಾಬಾದ್ : ಲೈಂಗಿಕ ಕಿರುಕುಳ ಪ್ರಕರಣದಲ್ಲಿ ತೆಲುಗು ಚಿತ್ರರಂಗದ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್‌ನನ್ನು ತೆಲಂಗಾಣ ಹೈಕೋರ್ಟ್ ಗುರುವಾರ ಜಾಮೀನು ಬಿಡುಗಡೆಗೊಳಿಸಿದೆ.

ತಾನು ಅಪ್ರಾಪ್ತ ವಯಸ್ಕಳಾಗಿದ್ದಾಗ ಹಿಡಿದು ಹಲವು ವರ್ಷಗಳಿಂದ ಜಾನಿ ಮಾಸ್ಟರ್ ತನಗೆ ಲೈಂಗಿಕ ಕಿರುಕುಳ ನೀಡಿದ್ದನೆಂದು ಆರೋಪಿಸಿ 21 ವರ್ಷದ ಯುವತಿಯೊಬ್ಬಳು ದೂರು ನೀಡಿದ್ದಳು. ಈ ಹಿನ್ನೆಲೆಯಲ್ಲಿ ತೆಲಂಗಾಣ ಪೊಲೀಸರು ಸೆಪ್ಟೆಂಬರ್ 19ರಂದು ಜಾನಿ ಮಾಸ್ಟರ್‌ನನ್ನು ಬಂಧಿಸಿದ್ದರು. ಈ ಯುವತಿಯು ಜಾನಿ ಮಾಸ್ಟರ್ ಬಳಿ ಸಹಾಯಕ ನೃತ್ಯ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಳೆನ್ನಲಾಗಿದೆ.

ಜಾನಿ ಮಾಸ್ಟರ್‌ನನ್ನು ಯುವತಿಯು 2017ರಲ್ಲಿ ಭೇಟಿಯಾಗಿದ್ದಳು. ಎರಡು ವರ್ಷಗಳ ಆನಂತರ ಆತ ಆಕೆಗೆ ತನ್ನ ಬಳಿ ಸಹಾಯಕ ನೃತ್ಯ ನಿರ್ದೇಶಕಿಯ ಕೆಲಸವನ್ನು ಕೊಡಿಸಿದ್ದನು. ಬಳಿಕ ಆತ ವಿವಿಧ ಸ್ಥಳಗಳಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಒಂದು ವೇಳೆ ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದಲ್ಲಿ ಪೊಲೀಸರಿಗೆ ದೂರು ನೀಡುವುದಾಗಿಯೂ ಬೆದರಿಕೆ ಹಾಕಿದ್ದನೆಂದು ಯುವತಿ ದೂರಿನಲ್ಲಿ ತಿಳಿಸಿದ್ದಳು.

ತೆಲುಗಿನ ಸೂಪರ್‌ಹಿಟ್ ಚಿತ್ರಗಳಾದ ‘ಬಾಹುಬಲಿ’, ‘ಪುಷ್ಪಾ’ದಂತಹ ಹಲವು ಸೂಪರ್‌ಹಿಟ್ ಚಿತ್ರಗಳಿಗೆ ಜಾನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾನೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News