ಸಿಬಿಐ ನಿರ್ದೇಶಕ ಪ್ರವೀಣ್ ಸೂದ್ ಆಸ್ಪತ್ರೆಗೆ ದಾಖಲು
Update: 2025-09-06 19:31 IST
ಪ್ರವೀಣ್ ಸೂದ್ |PC : PTI
ಹೈದರಾಬಾದ್: ಅಸ್ವಸ್ಥರಾಗಿದ್ದ ಕೇಂದ್ರೀಯ ತನಿಖಾ ದಳ (ಸಿಬಿಐ) ನಿರ್ದೇಶಕ ಪ್ರವೀಣ್ ಸೂದ್ ರನ್ನು ಹೈದರಾಬಾದ್ ನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಆಂಧ್ರಪ್ರದೇಶದ ದೇವಸ್ಥಾನ ನಗರಿಯಾದ ಶ್ರೀಕಾಕುಳಂಗೆ ಭೇಟಿ ನೀಡಿದ ನಂತರ, ಹೈದರಾಬಾದ್ ಗೆ ಮರಳುತ್ತಿದ್ದ ಪ್ರವೀಣ್ ಸೂದ್ ಶನಿವಾರ ಮಧ್ಯಾಹ್ನ ಮಾರ್ಗಮಧ್ಯದಲ್ಲಿ ಅಸ್ವಸ್ಥತೆಗೀಡಾಗಿದ್ದರಿಂದ, ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಹೇಳಲಾಗಿದೆ.
“ಅವರನ್ನು ಪರೀಕ್ಷೆಗಳಿಗೆ ಒಳಪಡಿಸಲಾಗಿದ್ದು, ಒಂದು ದಿನದ ಮಟ್ಟಿಗೆ ಅವರನ್ನು ವೈದ್ಯಕೀಯ ನಿಗಾವಣೆಯಲ್ಲಿಡಲಾಗಿದೆ” ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.