×
Ad

ಇ-ಕಾಮರ್ಸ್ ವೇದಿಕೆಗಳಲ್ಲಿ ವಾಕಿ-ಟಾಕಿಗಳ ಮಾರಾಟಕ್ಕೆ ಸಿಸಿಪಿಎ ಮಾರ್ಗಸೂಚಿ

Update: 2025-05-30 21:03 IST

ಸಾಂದರ್ಭಿಕ ಚಿತ್ರ | PC : freepik.com

ಹೊಸದಿಲ್ಲಿ: ಇ-ಕಾಮರ್ಸ್ ವೇದಿಕೆಗಳಲ್ಲಿ ವಾಕಿ-ಟಾಕಿಗಳು ಸೇರಿದಂತೆ ರೇಡಿಯೊ ಸಾಧನಗಳ ಅನಧಿಕೃತ ಪ್ರದರ್ಶನ ಮತ್ತು ಮಾರಾಟವನ್ನು ತಡೆಯಲು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ(ಸಿಸಿಪಿಎ)ವು ಸಮಗ್ರ ಮಾರ್ಗಸೂಚಿಯೊಂದನ್ನು ಶುಕ್ರವಾರ ಬಿಡುಗಡೆಗೊಳಿಸಿದೆ.

ಸೂಕ್ತ ಫ್ರೀಕ್ವೆನ್ಸಿ ಮಾಹಿತಿ,ಪರವಾನಿಗೆ ಮಾಹಿತಿ ಮತ್ತು ಸಾಧನದ ವಿಧಕ್ಕೆ ಅನುಮೋದನೆ ಇಲ್ಲದೆ ವಾಕಿ-ಟಾಕಿಗಳ ಮಾರಾಟ ಗ್ರಾಹಕ ರಕ್ಷಣಾ ಕಾಯ್ದೆ,2019ರ ಉಲ್ಲಂಘನೆಯಾಗಿದ್ದು,ಇದನ್ನು ತಡೆಯುವುದು ನೂತನ ಮಾರ್ಗಸೂಚಿಯ ಉದ್ದೇಶವಾಗಿದೆ.

ದೂರಸಂಪರ್ಕ ಇಲಾಖೆ ಮತ್ತು ಗೃಹ ವ್ಯವಹಾರಗಳ ಸಚಿವಾಲಯದ ಜೊತೆ ವ್ಯಾಪಕ ಅಂತರ-ಸಚಿವಾಲಯ ಸಮಾಲೋಚನೆಗಳ ಬಳಿಕ ನೂತನ ಮಾರ್ಗಸೂಚಿಯನ್ನು ರೂಪಿಸಲಾಗಿದೆ. ಎರಡೂ ಇಲಾಖೆಗಳಿಂದ ಪ್ರಮುಖ ನಿಯಂತ್ರಕ ಮತ್ತು ಭದ್ರತಾ ಪರಿಗಣನೆಗಳನ್ನು ಮಾರ್ಗಸೂಚಿಯಲ್ಲಿ ಸೇರಿಸಲಾಗಿದೆ.

ವೈರ್‌ಲೆಸ್ ಆಪರೇಟಿಂಗ್ ಪರವಾನಿಗೆಯ ಅಗತ್ಯಕ್ಕೆ ಸಂಬಂಧಿಸಿದಂತೆ ಕಡ್ಡಾಯ ಮತ್ತು ಬಹಿರಂಗ ಮಾಹಿತಿಗಳನ್ನು ಬಹಿರಂಗಗೊಳಿಸದೆ ಮತ್ತು ಅನ್ವಯವಾಗುವ ಕಾನೂನುಗಳನ್ನು ಅನುಸರಿಸದೆ ಇ-ಕಾಮರ್ಸ್ ವೇದಿಕೆಗಳಲ್ಲಿ ವಾಕಿ-ಟಾಕಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಸಿಸಿಪಿಎ ಹೇಳಿಕೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News