×
Ad

ಕಿರು ಮತ್ತು ದೀರ್ಘಾವಧಿಯ ಯುದ್ಧಗಳಿಗೆ ಭಾರತ ಸಿದ್ಧವಾಗಿರಬೇಕು: ಸಿಡಿಎಸ್ ಜನರಲ್ ಅನಿಲ್ ಚೌಹಾಣ್

Update: 2025-12-23 22:10 IST

ಅನಿಲ್ ಚೌಹಾಣ್ | Photo Credit : PTI  

ಹೊಸದಿಲ್ಲಿ, ಡಿ. 23: ಭಾರತವು ಭಯೋತ್ಪಾದನೆ ನಿಗ್ರಹಕ್ಕಾಗಿ ಕಿರು ಅವಧಿಯ ಗರಿಷ್ಠ ತೀವ್ರತೆಯ ಯುದ್ಧ ಹಾಗೂ ನೆರೆಯ ದೇಶಗಳೊಂದಿಗಿನ ಗಡಿ ವಿವಾದದ ಹಿನ್ನೆಲೆಯಲ್ಲಿ ದೀರ್ಘಾವಧಿಯ ಯುದ್ಧಗಳಿಗಾಗಿ ಸಿದ್ಧವಾಗಿರಬೇಕು ಎಂದು ಭಾರತೀಯ ಸೇನಾಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಸೋಮವಾರ ಹೇಳಿದ್ದಾರೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಯಾವ ರೀತಿಯ ಬೆದರಿಕೆಗಳಿಗೆ ಭಾರತ ಸಿದ್ಧವಾಗಬೇಕು ಎಂಬ ಬಗ್ಗೆ ವಿವರಣೆಗಳನ್ನು ನೀಡಿದರು. ಚೀನಾ ಮತ್ತು ಪಾಕಿಸ್ತಾನವನ್ನು ಅವರು ಹೆಸರಿಸದಿದ್ದರೂ, ಭಾರತವು ನೆರೆಯ ದೇಶಗಳೊಂದಿಗೆ ಭೂವಿವಾದಗಳನ್ನು ಹೊಂದಿದೆ ಎಂಬ ಸೂಚನೆಯನ್ನು ನೀಡಿದರು.

‘‘ಯಾವ ರೀತಿಯ ಬೆದರಿಕೆಗಳು ಮತ್ತು ಸವಾಲುಗಳಿಗೆ ಭಾರತ ಸಿದ್ಧವಾಗಿರಬೇಕು? ಇದು ಎರಡು ವಾಸ್ತವಗಳನ್ನು ಅವಲಂಬಿಸಿದೆ. ಎರಡೂ ನಮ್ಮ ಎದುರಾಳಿಗಳು. ಎರಡೂ ಪರಮಾಣು ಶಕ್ತ ದೇಶಗಳು. ಹಾಗಾಗಿ, ಈ ದೇಶಗಳ ವಿರುದ್ಧದ ನಮ್ಮ ತಡೆಯ ಮಟ್ಟವು ದುರ್ಬಲಗೊಳ್ಳಲು ನಾವು ಬಿಡಬಾರದು’’ ಎಂದು ಸೇನಾಧಿಕಾರಿ ಹೇಳಿದರು.

‘‘ಭಯೋತ್ಪಾದನೆಯನ್ನು ಹತ್ತಿಕ್ಕಲು ‘ಆಪರೇಶನ್ ಸಿಂಧೂರ್’ನಂಥ ಕಿರು ಅವಧಿಯ ಮತ್ತು ಗರಿಷ್ಠ ತೀವ್ರತೆಯ ಯುದ್ಧಗಳಿಗೆ ನಾವು ಸಿದ್ಧವಾಗಿರಬೇಕು. ನಾವು ಗಡಿ ವಿವಾದಗಳನ್ನು ಹೊಂದಿರುವುದರಿಂದ ಭೂಕೇಂದ್ರಿತ, ದೀರ್ಘಾವಧಿ ಯುದ್ಧಗಳಿಗೂ ನಾವು ತಯಾರಾಗಬೇಕು’’ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News