×
Ad

ವಯೋವೃದ್ಧ ಪಾಲಕರ ಶುಶ್ರೂಷೆಗಾಗಿ ಕೇಂದ್ರ ನೌಕರರಿಗೆ 30 ದಿನಗಳ ರಜೆ ಲಭ್ಯ

Update: 2025-07-24 21:33 IST

ಜಿತೇಂದ್ರ ಸಿಂಗ್ | PTI 

ಹೊಸದಿಲ್ಲಿ: ವಯೋವೃದ್ಧ ಪಾಲಕರ ಪಾಲನೆ ಶುಶ್ರೂಷೆ ಸೇರಿದಂತೆ ಯಾವುದೇ ವೈಯಕ್ತಿಕ ಕಾರಣಕ್ಕಾಗಿ ಕೇಂದ್ರ ಸರಕಾರದ ಉದ್ಯೋಗಿಗಳಿಗೆ 30 ದಿನಗಳ ರಜೆಯನ್ನು ಪಡೆದುಕೊಳ್ಳುವುದಕ್ಕೆ ಸೇವಾ ನಿಯಮಗಳು ಅನುಮತಿ ನೀಡುತ್ತವೆ ಎಂದು ಕೇಂದ್ರ ಸಿಬ್ಬಂದಿ,ಸಾರ್ವಜನಿಕ ಕುಂದುಕೊರತೆ ಖಾತೆಯ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಗುರುವಾರ ರಾಜ್ಯಸಭೆಗೆ ತಿಳಿಸಿದ್ದಾರೆ.

ಹಿರಿಯ ಪಾಲಕರ ಶುಶ್ರೂಷೆಗಾಗಿ ಸರಕಾರಿ ಉದ್ಯೋಗಿಗಳಿಗೆ ರಜೆಯನ್ನು ಪಡೆಯಲು ನಿಯಮವೇನಾದರೂ ಇದೆಯೇ ಎಂದು ಸದನಲ್ಲಿ ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು.

ಕೇಂದ್ರ ನಾಗರಿಕ ಸೇವೆಗಳು (ರಜೆ) ನಿಯಮಗಳು, 1972 ಕೇಂದ್ರ ಸರಕಾರದ ಉದ್ಯೋಗಿಗಳಿಗೆ 30 ದಿನಗಳ ವೇತನಸಹಿತ ರಜೆ, 20 ದಿನಗಳ ಅರ್ಧಾಂಶವೇತನ ಸಹಿತ ರಜೆ, ಎಂಟು ದಿನಗಳ ಸಾಂದರ್ಭಿಕ ರಜೆ ಹಾಗೂ ಎರಡು ದಿನಗಳ ನಿರ್ಬಂಧಿತ ರಜೆಯನ್ನು ಒದಗಿಸುತ್ತದೆ. ಇದರ ಜೊತೆಗೆ ಕೇಂದ್ರ ನೌಕರನಿಗೆ ನೀಡಲಾಗುವ ಇತರ ಅರ್ಹ ರಜೆಗಳನ್ನು ವಯೋವೃದ್ಧ ತಂದೆತಾಯಿಗಳ ಪಾಲನೆ ಸೇರಿದಂತೆ ಇತರ ಯಾವುದೇ ವೈಯಕ್ತಿಕ ಕಾರಣಗಳಿಗಾಗಿ ಪಡೆದುಕೊಳ್ಳಬಹುದಾಗಿದೆ ಎಂದು ಸಿಂಗ್ ಲಿಖಿತ ಉತ್ತರವೊಂದರಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News