×
Ad

14 ಖಾರಿಫ್ ಬೆಳೆಗಳ ಬೆಂಬಲ ಬೆಲೆ ಹೆಚ್ಚಳ; ಕೇಂದ್ರ ಸಂಪುಟದಿಂದ ಮಹತ್ವದ ನಿರ್ಧಾರ

Update: 2025-05-29 00:01 IST

 ಅಶ್ವಿನಿ ವೈಷ್ಣವ್ | PTI 

ಹೊಸದಿಲ್ಲಿ: 2025-26 ಮಾರುಕಟ್ಟೆ ಋತುವಿನಲ್ಲಿ 14 ಖಾರಿಫ್ ಬೆಳಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಿಸಲು ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ ಸಭೆಯಲ್ಲಿ ಎಂಎಸ್‌ಪಿ ಕುರಿತು ಕೃಷಿ ಸಚಿವಾಲಯದ ಪ್ರಸ್ತಾವವನ್ನು ಅನುಮೋದಿಸಲಾಗಿದೆ.

ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್‌ ಗೆ 69 ರೂ. ಹೆಚ್ಚಿಸಲಾಗಿದೆ. ಇದರಿಂದ ಈ ಋತುವಿನಲ್ಲಿ ಭತ್ತದ ಹೊಸ ಬೆಲೆ 2,369 ರೂ.ಗೆ ತಲುಪಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಭವ್ ಅವರು ತಿಳಿಸಿದ್ದಾರೆ.

ಹುಚ್ಚೆಳ್ಳು (ಪ್ರತಿ ಕ್ವಿಂಟಾಲ್‌ ಗೆ 820 ರೂ.), ರಾಗಿ (ಪ್ರತಿ ಕ್ವಿಂಟಾಲ್‌ ಗೆ 596 ರೂ.), ಹತ್ತಿ (ಪ್ರತಿ ಕ್ವಿಂಟಾಲ್‌ ಗೆ 589 ರೂ.), ಎಳ್ಳು (ಪ್ರತಿ ಕ್ವಿಂಟಾಲ್‌ ಗೆ 579 ರೂ.) ಅತ್ಯಧಿಕ ಕನಿಷ್ಠ ಬೆಂಬಲ ಬೆಲೆಯನ್ನು ಶಿಫಾರಸು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಎಣ್ಣೆ ಬೀಜಗಳಲ್ಲಿ ನೆಲಗಡಲೆ (ಪ್ರತಿ ಕ್ವಿಂಟಾಲ್‌ ಗೆ)ಗೆ 480 ರೂ., ಸೂರ್ಯಕಾಂತಿ ಬೀಜ (ಪ್ರತಿ ಕ್ವಿಂಟಾಲ್‌ ಗೆ)ಕ್ಕೆ 441 ರೂ. ಹಾಗೂ ಸೋಯಾಬೀನ್(ಪ್ರತಿ ಕ್ವಿಂಟಾಲ್‌ ಗೆ)ಗೆ ರೂ. 446 ರೂ. ಕನಿಷ್ಠ ಬೆಂಬಲ ಬೆಲೆ ಏರಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ದ್ವಿದಳ ಧಾನ್ಯಗಳಲ್ಲಿ ತೊಗರಿ ಬೇಳೆ (ಪ್ರತಿ ಕ್ವಿಂಟಾಲ್‌ ಗೆ) ಹಾಗೂ ಹೆಸರು ಬೇಳೆ (ಪ್ರತಿ ಕ್ವಿಂಟಾಲ್‌ ಗೆ)ಯ ಕನಿಷ್ಠ ಬೆಂಬಲ ಬೆಲೆಯನ್ನು ಅನುಕ್ರಮವಾಗಿ 450 ರೂ. 85 ರೂ. ಏರಿಕೆ ಮಾಡಲಾಗಿದೆ. ಉದ್ದಿನ ಬೇಳೆಯ ಬೆಂಬಲ ಬೆಲೆಯನ್ನು 400 ರೂ. ಏರಿಕೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News