×
Ad

ಭಾರತ- ಪಾಕ್ ನಡುವೆ ಉದ್ವಿಗ್ನತೆ | 24 ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಮೇ.15ರವರೆಗೆ ಸ್ಥಗಿತ

Update: 2025-05-09 20:24 IST

Photo | hindustantimes

ಹೊಸದಿಲ್ಲಿ : ಆಪರೇಷನ್ ಸಿಂಧೂರ ಬಳಿಕ ಭಾರತ ಪಾಕ್ ನಡುವಿನ ಉದ್ವಿಗ್ನತೆ ಮಧ್ಯೆ ಕೇಂದ್ರ ಸರಕಾರ ದೇಶದಾದ್ಯಂತ 24 ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನು ಮೇ.15ರವರೆಗೆ ಸ್ಥಗಿತಗೊಳಿಸಿದೆ.

ʼಮೇ.10ರವರೆಗೆ 24 ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗುವುದುʼ ಎಂದು ಗುರುವಾರ ನಾಗರಿಕ ವಿಮಾನಯಾನ ಸಚಿವಾಲಯ ಹೇಳಿತ್ತು.

ಚಂಡೀಗಢ, ಶ್ರೀನಗರ, ಅಮೃತಸರ, ಲೂಧಿಯಾನ, ಭುಂತರ್, ಕಿಶನ್‌ಗಢ, ಪಟಿಯಾಲ, ಶಿಮ್ಲಾ, ಜೈಸಲ್ಮೇರ್, ಪಠಾಣ್‌ಕೋಟ್‌, ಜಮ್ಮು, ಬಿಕಾನೇರ್, ಲೇಹ್, ಪೋರಬಂದರ್ ಸೇರಿದಂತೆ 24 ವಿಮಾನ ನಿಲ್ಧಾಣಗಳ ಕಾರ್ಯಾಚರಣೆ ಮೇ.15ರವರೆಗೆ ಸ್ಥಗಿತಗೊಳ್ಳಲಿದೆ ಎಂದು ವರದಿಯಾಗಿದೆ.

ʼದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಗಳು ಸಾಮಾನ್ಯವಾಗಿವೆ. ಆದರೆ ಹೆಚ್ಚಿದ ಭದ್ರತೆಯ ದೃಷ್ಟಿಯಿಂದ ಕೆಲವು ವಿಮಾನಗಳ ವೇಳಾಪಟ್ಟಿಗಳು ಮತ್ತು ಸಮಯಗಳ ಮೇಲೆ ಪರಿಣಾಮ ಬೀರಬಹುದುʼ ಎಂದು ಡಿಐಎಎಲ್(DIAL) ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News