×
Ad

ಜಾತಿ ಗಣತಿ ನಡೆಸುವ ಕೇಂದ್ರದ ನಡೆ ಸ್ವಾಗತಾರ್ಹ : ರಾಹುಲ್ ಗಾಂಧಿ

Update: 2025-04-30 21:02 IST

 ರಾಹುಲ್ ಗಾಂಧಿ | PC : PTI  

ಹೊಸದಿಲ್ಲಿ: ಕಾಂಗ್ರೆಸ್ ಪಕ್ಷವು ಜಾತಿ ಗಣತಿ ನಡೆಸುವ ಕೇಂದ್ರ ಸರಕಾರದ ನಿರ್ಧಾರವನ್ನು ಸ್ವಾಗತಿಸುತ್ತದೆ. ಇಲ್ಲಿಯವರೆಗೆ ಸರಕಾರವು ಜಾತಿಗಣತಿಯನ್ನು ನಿರಾಕರಿಸುತ್ತಲೇ ಬಂದಿತ್ತು, ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಜಾತಿ ಗಣತಿಯನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಆದರೆ ಅದನ್ನು ಯಾವಾಗ ಮಾಡಲಾಗುತ್ತದೆ ಎಂಬುದರ ಕುರಿತು ನಮಗೆ ಸಮಯಸೂಚಿ ಬೇಕು. ತೆಲಂಗಾಣ ಮತ್ತು ಬಿಹಾರ ರಾಜ್ಯಗಳು ಮಾಡಿರುವ ಜಾತಿ ಗಣತಿಗಳು ಇದಕ್ಕೆ ಮಾದರಿಯಾಗಿವೆ”, ಎಂದು ಹೇಳಿದರು.

ಮೀಸಲಾತಿಯ ಮೇಲಿನ ಶೇಕಡಾ 50 ರ ಮಿತಿಯನ್ನು ತೆಗೆದುಹಾಕಬೇಕೆಂಬ ಪಕ್ಷದ ಬೇಡಿಕೆಯನ್ನು ರಾಹುಲ್ ಗಾಂಧಿ ಪುನರುಚ್ಚರಿಸಿದರು. ಜಾತಿ ಗಣತಿಗೆ ಬಜೆಟ್ ನಿಗದಿಪಡಿಸಬೇಕು. ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಬೇಕು ಎಂದು ಅವರು ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News