×
Ad

GOAT Tour : ಕೊಲ್ಕತ್ತಾ ಕ್ರೀಡಾಂಗಣದಲ್ಲಿ ಮೆಸ್ಸಿ ಅಭಿಮಾನಿಗಳಿಂದ ದಾಂಧಲೆ

ಮೆಸ್ಸಿ ಕ್ರೀಡಾಂಗಣದಿಂದ 10 ನಿಮಿಷದಲ್ಲಿ ನಿರ್ಗಮಿಸಿದ್ದಕ್ಕೆ ಆಕ್ರೋಶ

Update: 2025-12-13 13:07 IST
Photo credit: X/ANI

ಕೊಲ್ಕತ್ತಾ: ಲಯೋನೆಲ್ ಮೆಸ್ಸಿಯ GOAT ಇಂಡಿಯಾ ಟೂರ್ ಸಂಭ್ರಮಾಚರಣೆಗೆ ಬದಲು ಕೊಲ್ಕತ್ತಾ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಅಶಾಂತಿಗೆ ಕಾರಣವಾಗಿದೆ. ಮೆಸ್ಸಿ ಅಭಿಮಾನಿಗಳು ಕ್ರೀಡಾಂಗಣದಲ್ಲಿ ದಾಂಧಲೆ ನಡೆಸಿದ್ದಾರೆ.

ವರದಿಗಳ ಪ್ರಕಾರ, ಮೆಸ್ಸಿ ಅಭಿಮಾನಿಗಳು ಕ್ರೀಡಾಂಗಣದಲ್ಲಿನ ಪೋಸ್ಟರ್‌ಗಳನ್ನು ಮತ್ತು ಹೋರ್ಡಿಂಗ್‌ಗಳನ್ನು ಒಡೆದು ಹಾಕಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಮೆಸ್ಸಿ ಕ್ರೀಡಾಂಗಣದಿಂದ 10 ನಿಮಿಷಗಳಿಗಿಂತ ಕಡಿಮೆ ಸಮಯದಲ್ಲಿ ನಿರ್ಗಮಿಸಿದರು. ಇದರಿಂದ ಮೆಸ್ಸಿಯನ್ನು ನೋಡಲು ಗಂಟೆಗಟ್ಟಲೆ ಕಾಯುತ್ತಿದ್ದ ಅನೇಕ ಅಭಿಮಾನಿಗಳು ನಿರಾಶೆಗೊಂಡರು. ಕ್ರೀಡಾಂಗಣದ ಒಳಗಿನ ನಾಟಕೀಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News