×
Ad

ಜಮ್ಮು,ಕಾಶ್ಮೀರ ವಿಧಾನಸಭೆ ಮೊದಲ ಅಧಿವೇಶನ: ಗದ್ದಲ ಸೃಷ್ಟಿಸಿದ ವಿಧಿ 370 ರದ್ದತಿ ವಿರುದ್ಧದ ನಿರ್ಣಯ

Update: 2024-11-04 14:20 IST

Photo credit: ANI

ಜಮ್ಮು,ಕಾಶ್ಮೀರ: ಆರು ವರ್ಷಗಳ ನಂತರ ಸೋಮವಾರ ಜಮ್ಮು, ಕಾಶ್ಮೀರ ವಿಧಾನಸಭೆಯ ಮೊದಲ ಅಧಿವೇಶನ ನಡೆದಿದೆ. ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ) ಶಾಸಕ ವಹೀದ್ ಪ್ಯಾರಾ ಸದನದಲ್ಲಿ ವಿಧಿ 370 ರದ್ದತಿಯನ್ನು ವಿರೋಧಿಸಿ ನಿರ್ಣಯವನ್ನು ಮಂಡಿಸಿದ್ದು, ಬಿಜೆಪಿ ಶಾಸಕರು ಗದ್ದಲವನ್ನು ಸೃಷ್ಟಿಸಿದ್ದಾರೆ.

ಪುಲ್ವಾಮಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ವಹೀದ್ ಪ್ಯಾರಾ ಅವರು ಸ್ಪೀಕರ್ ಅಬ್ದುಲ್ ರಹೀಮ್ ರಾಥರ್ ಅವರಿಗೆ ನಿರ್ಣಯವನ್ನು ಸಲ್ಲಿಸಿದ್ದು, ಐದು ದಿನಗಳ ಅಧಿವೇಶನದಲ್ಲಿ ಈ ವಿಷಯದ ಬಗ್ಗೆ ತುರ್ತು ಚರ್ಚೆಗೆ ವಿನಂತಿಸಿದ್ದಾರೆ.

ನಿರ್ಣಯವನ್ನು ಸಲ್ಲಿಸಿದ ಬೆನ್ನಲ್ಲಿ ಜಮ್ಮು,ಕಾಶ್ಮೀರ ವಿಧಾನಸಭೆಯ ಎಲ್ಲಾ 28 ಬಿಜೆಪಿ ಶಾಸಕರು ಈ ಕ್ರಮವನ್ನು ವಿರೋಧಿಸಿ ವಿಧಾನಸಭೆಯಲ್ಲಿ ಗದ್ದಲ ಸೃಷ್ಟಿಸಿದ್ದಾರೆ. ಪ್ರತಿಭಟನಾ ನಿರತ ಸದಸ್ಯರಿಗೆ ಆಸನಗಳಲ್ಲಿ ಕುಳಿತುಕೊಳ್ಳುವಂತೆ ಸ್ಪೀಕರ್ ಮನವಿ ಮಾಡಿದರೂ ಅವರು ಧರಣಿ ಮುಂದುವರಿಸಿದ್ದರು.

ವಿಧಾನಸಭೆ ನಿಯಮಾವಳಿಗಳನ್ನು ಉಲ್ಲಂಘಿಸಿ ನಿರ್ಣಯ ಸಲ್ಲಿಸಿದ್ದಕ್ಕೆ ಪ್ಯಾರಾ ಅವರನ್ನು ಅಮಾನತುಗೊಳಿಸುವಂತೆ ಬಿಜೆಪಿ ಶಾಸಕ ಶಾಮ್ ಲಾಲ್ ಶರ್ಮಾ ಒತ್ತಾಯಿಸಿದ್ದಾರೆ.

ಬಿಜೆಪಿ ಸದಸ್ಯರು ಪ್ರತಿಭಟನೆಯನ್ನು ಹಿಂಪಡೆಯಲು ನಿರಾಕರಿಸಿದಾಗ, ನ್ಯಾಷನಲ್ ಕಾನ್ಫರೆನ್ಸ್ ಶಾಸಕರು ಸದನದ ಕಲಾಪಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಬಿಜೆಪಿ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, ನಿರ್ಣಯಕ್ಕೆ ಯಾವುದೇ ಪ್ರಾಮುಖ್ಯತೆ ಇಲ್ಲ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News