×
Ad

ಚೆನ್ನೈಗೆ ಆಗಮಿಸುತ್ತಿದ್ದ ಸರಕು ವಿಮಾನದ ಎಂಜಿನ್‌ ನಲ್ಲಿ ಬೆಂಕಿ

Update: 2025-08-12 21:57 IST

Image Source : X/@Turbinetraveler 

ಚೆನ್ನೈ, ಆ. 12: ಮಂಗಳವಾರ ಇಲ್ಲಿಗೆ ಆಗಮಿಸುತ್ತಿದ್ದ ಅಂತರ ರಾಷ್ಟ್ರೀಯ ಸರಕು ವಿಮಾನದ ಒಂದು ಎಂಜಿನ್‌ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿಮಾನ ಇಲ್ಲಿ ಇಳಿದ ಬಳಿಕ ಬೆಂಕಿಯನ್ನು ನಂದಿಸಿದ್ದು, ಯಾರೊಬ್ಬರಿಗೂ ಗಾಯಗಳಾಗಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ವಿಮಾನ ಮಲೇಶ್ಯಾದ ಕೌಲಲಾಂಪುರದಿಂದ ಆಗಮಿಸುತ್ತಿತ್ತು.

ವಿಮಾನ ಇಲ್ಲಿ ಇಳಿಯುತ್ತಿದ್ದ ಸಂದರ್ಭ ನಾಲ್ಕನೇ ಎಂಜಿನ್‌ ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಕೂಡಲೇ ಪೈಲಟ್‌ ಗಳು ಸಂಬಂಧಿತ ಅಧಿಕಾರಿಗಳನ್ನು ಎಚ್ಚರಿಸಿದರು ಎಂದು ಅವು ತಿಳಿಸಿವೆ.

ಆದರೆ, ಪೈಲಟ್ ವಿಮಾನವನ್ನು ತುರ್ತು ಭೂ ಸ್ಪರ್ಶ ಮಾಡಿಸಲಿಲ್ಲ. ಬದಲಾಗಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದರು ಎಂದು ಅವು ಹೇಳಿವೆ.

ನಗರದ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿದ ಬಳಿಕ ಸ್ಥಳದಲ್ಲಿದ್ದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.

ಈ ಅಗ್ನಿ ಆಕಸ್ಮಿಕದ ಕುರಿತು ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News