ಚೆನ್ನೈ ಸಮೀಪ ರೈಲಿನಲ್ಲಿ ಒಡಿಶಾ ಯುವಕನ ಮೇಲೆ ಮಾರಕಾಯುಧಗಳಿಂದ ಬಾಲಕರ ದಾಳಿ
Update: 2025-12-31 22:14 IST
ಚೆನ್ನೈ: ಸಮೀಪದ ತಿರುತ್ತಣಿಯಲ್ಲಿ ಹೊರರಾಜ್ಯದ ಯುವಕನೊಬ್ಬನ ಮೇಲೆ ಕುಡುಗೋಲುಗಳಿಂದ ದಾಳಿ ನಡೆಸಿದ 17 ವರ್ಷದ ಬಾಲಕರನ್ನು ಬಂಧಿಸಿದ ಘಟನೆ ವರದಿಯಾಗಿದೆ.
ತಿರುತ್ತಣಿಯಲ್ಲಿ ದಾಳಿಗೊಳಗಾದ ಸೂರಜ್ ಅವರಿಗೆ ಗಾಯಗಳಾಗಿದ್ದು, ಸದ್ಯಕ್ಕೆ ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಒಡಿಶಾ ಮೂಲದ ಸೂರಜ್, ಚೆನ್ನೈ–ತಿರುತ್ತಣಿ ಇಎಂಯು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಪಾನಮತ್ತ ಬಾಲಕರು ರೈಲನ್ನೇರಿದ್ದರು. ಇನ್‌ಸ್ಟಾಗ್ರಾಂಗಾಗಿ ರೀಲ್ಸ್ ಮಾಡುತ್ತಿದ್ದ ಅವರು ನಾಟಕೀಯವಾಗಿ ಸೂರಜ್ ನ ಕೊರಳಿಗೆ ಕುಡುಗೋಲನ್ನು ಹಿಡಿದಿದ್ದರು. ಅದನ್ನು ಸೂರಜ್ ಆಕ್ಷೇಪಿಸಿದಾಗ, ಬಾಲಕರು ಆತನಿಗೆ ಇರಿದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.