×
Ad

ಚತ್ತೀಸ್‌ಗಡ: ಐಇಡಿ ಸ್ಫೋಟಿಸಿ ಕನಿಷ್ಠ ಐವರು ಸಿಆರ್‌ಪಿಎಫ್ ಯೋಧರಿಗೆ ಗಾಯ

Update: 2024-09-29 20:20 IST

PC : PTI

ಬಿಜಾಪುರ್ :ಚತ್ತೀಸ್‌ಗಡದ ಬಿಜಾಪುರ್ ಜಿಲ್ಲೆಯಲ್ಲಿ ರವಿವಾರ ನಕ್ಸಲೀಯರು ಇರಿಸಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಿಸಿ, ಕನಿಷ್ಠ ಐವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ಪ್ರದೇಶದಲ್ಲಿರುವ ಚಿಂಗೆಲೂರ್ ಸಿಆರ್‌ಪಿಎಫ್ ಶಿಬಿರದ ಯೋಧರು, ಪ್ರದೇಶದಲ್ಲಿ ನಕ್ಸಲರು ಅಳವಡಿಸಿದ್ದ ನೆಲಬಾಂಬ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.

ನೆಲಬಾಂಬ್‌ಗಳನ್ನು ಪತ್ತೆ ಹಚ್ಚಿ ತೆರವುಗೊಳಿಸುವ ಕಾರ್ಯಾಚರಣೆ ನಡೆಸುತ್ತಿದ್ದಾಗ ವೈರ್ ಒಂದನ್ನು ಪ್ರೆಶರಿಂಗ್ ಉಪಕರಣವೊಂದಕ್ಕೆ ಸಂಪರ್ಕಿಸಿರುವುದನ್ನು ಕಂಡರು.ಆಗ ವಯರ್ ಜೊತೆ ಸಂಪರ್ಕಿಸಲ್ಪಟ್ಟಿರುವ ಬಾಂಬ್‌ಗಾಗಿ ಹುಡುಕಾಡುತ್ತಿದ್ದಾಗ ಹಠಾತ್ತನೆ ಸ್ಫೋಟಿ ಸಂಭವಿಸಿದ್ದು, ಐದು ಮಂದಿ ಯೋಧರು ಗಾಯಗೊಂಡರು. ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದ ಬಳಿಕ ಕೂಡಲೇ ಅವರನ್ನು ಬಿಜಾಪುರ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಸಿಆರ್‌ಪಿಎಫ್ ಯೋಧರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News