×
Ad

ಚತ್ತೀಸ್‌ಗಢ: ಸಹೋದ್ಯೋಗಿಯನ್ನು ಗುಂಡಿಕ್ಕಿಹತ್ಯೆಗೈದ ಆರ್‌ಪಿಎಫ್ ಹೆಡ್ ಕಾನ್ಸ್‌ಟೆಬಲ್

Update: 2025-12-03 20:57 IST

Photo Credit : NDTV 

ರಾಯಪುರ, ಡಿ. 3: ಚತ್ತೀಸ್‌ಗಢದ ರಾಯಘಡದಲ್ಲಿರುವ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಠಾಣೆಯಲ್ಲಿ ಆರ್‌ಪಿಎಫ್ ಕಾನ್ಸ್‌ಟೇಬಲ್ ಓರ್ವ ತನ್ನ ಸಹೋದ್ಯೋಗಿಯನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಬುಧವಾರ ಮುಂಜಾನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಆರ್‌ಪಿಎಫ್ ಸಿಬ್ಬಂದಿ ಎಸ್. ಲಾಡರ್ ಹೆಡ್ ಕಾನ್ಸ್‌ಟೆಬಲ್ ಕೂಡ ಆಗಿರುವ ತನ್ನ ಬ್ಯಾಚ್‌ಮೇಟ್ ಪಿ.ಕೆ. ಮಿಶ್ರಾ ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ. ವಾಗ್ವಾದ ವಿಕೋಪಕ್ಕೆ ಹೋದಾಗ, ಲಾಡರ್ ತನ್ನ ಸೇವಾ ರಿವಾಲ್ವರ್ ತೆಗೆದು ಗುಂಡು ಹಾರಿಸಿದ್ದಾರೆ.

‘‘ಇಂದು ಬೆಳಗ್ಗೆ ಆರ್‌ಪಿಎಫ್ ಯೋಧ ತನ್ನ ಸೇವಾ ರಿವಾಲ್ವರ್‌ ನಿಂದ ಸಹೋದ್ಯೋಗಿಯನ್ನು ಗುಂಡು ಹಾರಿಸಿ ಹತ್ಯೆಗೈದಿದ್ದಾನೆ. ಇಬ್ಬರೂ ಕಾನ್ಸ್‌ಟೆಬಲ್‌ಗಳು. ಬುಧವಾರ ಮುಂಜಾನೆ 4 ಗಂಟೆಗೆ ಈ ಘಟನೆ ನಡೆದಿದೆ. ಆರೋಪಿ ಯೋಧನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅವರು ನಡುವಿನ ವಾಗ್ವಾದಕ್ಕೆ ಖಚಿತ ಕಾರಣ ಇದುವರೆಗೆ ತಿಳಿದು ಬಂದಿಲ್ಲ. ತನಿಖೆ ಮುಂದುವರಿದಿದೆ ಎಂದು ರಾಯಗಢದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆಕಾಶ್ ಮರ್ಕಮ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News