×
Ad

ಛತ್ತೀಸ್‌ಗಡ| 52 ಮಾವೋವಾದಿಗಳ ಶರಣಾಗತಿ

Update: 2026-01-16 20:01 IST

Photo Credit : newindianexpress.com

ಬಿಜಾಪುರ,ಜ.16: ಛತ್ತೀಸ್‌ಗಡದ ಬಿಜಾಪುರದಲ್ಲಿ 21 ಮಹಿಳೆಯರು ಸೇರಿದಂತೆ 52 ಮಾವೋವಾದಿಗಳು ಗುರುವಾರ ಭದ್ರತಾ ಪಡೆಗಳ ಮುಂದೆ ಶರಣಾಗಿದ್ದು, ಈ ಪೈಕಿ 49 ಜನರ ಮೇಲೆ ಒಟ್ಟು 1.4 ಕೋಟಿ ರೂ.ಗಳ ಬಹುಮಾನವನ್ನು ಘೋಷಿಸಲಾಗಿತ್ತು. ಎಲ್ಲರೂ ಮಾವೋವಾದಿ ದಕ್ಷಿಣ ಉಪ ವಲಯ ಘಟಕಕ್ಕೆ ಸೇರಿದವರಾಗಿದ್ದಾರೆ.

ಬುಧವಾರ ನೆರೆಯ ಸುಕ್ಮಾ ಜಿಲ್ಲೆಯಲ್ಲಿ 29 ಮಾವೋವಾದಿಗಳು ಶರಣಾಗಿದ್ದರು. ಜ.7ರಂದು ಸುಕ್ಮಾದಲ್ಲಿ 26 ಮತ್ತು ಒಂದು ದಿನದ ಬಳಿಕ ದಂತೇವಾಡಾದಲ್ಲಿ 63 ಮಾವೋವಾದಿಗಳು ಶರಣಾಗಿದ್ದರು.

ಎಲ್ಲ ಶರಣಾಗತ ಮಾವೋವಾದಿಗಳಿಗೆ ತಕ್ಷಣದ ನೆರವಾಗಿ ತಲಾ 50,000ರೂ.ಗಳನ್ನು ನೀಡಲಾಗುವುದು ಮತ್ತು ಪುನರ್ವಸತಿಯನ್ನು ಕಲ್ಪಿಸಲಾಗುವುದು ಎಂದು ಬಿಜಾಪುರ ಎಸ್‌ಪಿ ಜಿತೇಂದ್ರ ಕುಮಾರ್ ಅವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

2014 ಮತ್ತು 2025ರ ಡಿ.1ರ ನಡುವೆ 1,800ಕ್ಕೂ ಅಧಿಕ ಮಾವೋವಾದಿಗಳನ್ನು ಹತ್ಯೆಮಾಡಲಾಗಿದ್ದು,16,000ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ. ಈ ಅವಧಿಯಲ್ಲಿ 9,580ಕ್ಕೂ ಹೆಚ್ಚು ಮಾವೋವಾದಿಗಳು ಶರಣಾಗಿದ್ದಾರೆ ಎಂದು ಕೇಂದ್ರ ಸರಕಾರವು ಡಿ.16ರಂದು ಸಂಸತ್ತಿನಲ್ಲಿ ತಿಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News