ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ: ಪ್ರತಿ ಡಾಲರ್‌ಗೆ 90.84ರೂ.!
Photo Credit: freepik.com
ಮುಂಬೈ: ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೊಮ್ಮೆ ಸಾರ್ವಕಾಲಿಕ ಪತನಗೊಂಡಿದ್ದು, ಪ್ರತಿ ಡಾಲರ್ ಗೆ 90.84 ರೂ.ಗೆ ತಲುಪಿದೆ. ಏರುತ್ತಿರುವ ಕಚ್ಚಾ ತೈಲ ಬೆಲೆ ಹಾಗೂ ವಿದೇಶಿ ಹೂಡಿಕೆಯ ನಿರಂತರ ಹೊರಹರಿವು ಇದಕ್ಕೆ ಕಾರಣ ಎನ್ನಲಾಗಿದೆ.
ದೇಶೀಯ ಹೂಡಿಕೆದಾರರು ಡಾಲರ್ ಖರೀದಿಯನ್ನು ಮುಂದುವರಿಸಿದರೂ, ಜಾಗತಿಕ ಆರ್ಥಿಕತೆಯ ಚಂಚಲತೆ, ಹಾಗೂ ದೃಢ ಅಮೆರಿಕ ಡಾಲರ್ ಮೌಲ್ಯದ ಕಾರಣಕ್ಕೆ ಹೂಡಿಕೆದಾರರು ವಿದೇಶಿ ಸಾಂಸ್ಥಿಕ ಹೂಡಿಕೆಯನ್ನು ಹಿಂಪಡೆದಿದ್ದರಿಂದ, ರೂಪಾಯಿ ಮೌಲ್ಯ ಕುಸಿತ ಕಂಡಿದೆ ಎಂದು ವಿದೇಶಿ ವಿನಿಮಯ ವ್ಯಾಪಾರಸ್ಥರು ಅಭಿಪ್ರಾಯ ಪಟ್ಟಿದ್ದಾರೆ.
ವಿದೇಶಿ ವಿನಿಮಯದ ಅಂತರ್ ಬ್ಯಾಂಕ್ ನಲ್ಲಿ ಇಂದು ರೂಪಾಯಿ ಪ್ರತಿ ಡಾಲರ್ ಎದುರು 90.37 ಮೌಲ್ಯದೊಂದಿಗೆ ಪ್ರಾರಂಭಗೊಂಡಿತು. ಮಧ್ಯಾವಧಿಯ ವೇಳೆಗೆ ಪ್ರತಿ ಡಾಲರ್ ಎದುರು 90.89 ರೂ.ಗೆ ಕುಸಿದ ರೂಪಾಯಿ ಮೌಲ್ಯ, ದಿನದಾಂತ್ಯದ ವೇಳೆಗೆ ತಾತ್ಕಾಲಿಕವಾಗಿ 90.84 ರೂಪಾಯಿಗೆ ಇಳಿಕೆಯಾಯಿತು. ಆ ಮೂಲಕ, ಬುಧವಾರದ ವಹಿವಾಟಿಗೆ ಹೋಲಿಸಿದರೆ, ಇಂದು ಮತ್ತೆ 50 ಪೈಸೆಯಷ್ಟು ನಷ್ಟ ಅನುಭವಿಸಿತು.