×
Ad

ದಿಲ್ಲಿ: ಸಹಪಾಠಿ ಬಾಲಕಿಯೊಂದಿಗೆ ಮಾತನಾಡಿದ ವಿದ್ಯಾರ್ಥಿಯ ಬೆರಳು ಕತ್ತರಿಸಿದ ಹಿರಿಯ ವಿದ್ಯಾರ್ಥಿ

Update: 2023-11-12 22:52 IST

Photo : ndtv - ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಸಹಪಾಠಿ ಬಾಲಕಿಯೊಂದಿಗೆ ಮಾತನಾಡಿರುವುದಕ್ಕೆ 12ನೇ ತರಗತಿ ವಿದ್ಯಾರ್ಥಿಗೆ ಹಿರಿಯ ವಿದ್ಯಾರ್ಥಿ ಹಲ್ಲೆ ನಡೆಸಿ, ಆತನ ಬೆರಳು ಕತ್ತರಿಸಿದ ಘಟನೆ ದಿಲ್ಲಿಯ ದ್ವಾರಕಾ ದಕ್ಷಿಣದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಅ .21ರಂದು ನಡೆಡಿದಿದ್ದು, ಶುಕ್ರವಾರ ಬೆಳಕಿಗೆ ಬಂದಿದೆ.

ವಿದ್ಯಾರ್ಥಿ ತೀವ್ರ ಭೀತಿಗೊಂಡಿದ್ದ. ಆದುದರಿಂದ ಆತ ಹಿರಿಯ ವಿದ್ಯಾರ್ಥಿಯಿಂದ ತನ್ನ ಮೇಲೆ ನಡೆದ ಹಲ್ಲೆಯನ್ನು ಪೋಷಕರಿಗೆ ತಿಳಿಸಿರಲಿಲ್ಲ. ಮೋಟಾರು ಸೈಕಲ್ ಚೈನ್ ನಿಂದ ತನ್ನ ಬೆರಳು ತುಂಡಾಗಿದೆ ಎಂದು ಆತ ಹೇಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿ ಶುಕ್ರವಾರ ನಡೆದ ಘಟನೆಯನ್ನು ಬಹಿರಂಗಪಡಿಸಿದ ಬಳಿಕ ಆತನ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News