×
Ad

ಮಧುರೈನಿಂದ ಕೊಯಮತ್ತೂರಿಗೆ ಮೆಟ್ರೋ ಯೋಜನೆ ಕುರಿತ ಪ್ರಸ್ತಾಪ ರದ್ದುಗೊಳಿಸುವ ಕೇಂದ್ರ ಸರಕಾರದ ನಿರ್ಧಾರ ಸೇಡಿನ ಕ್ರಮ : ಸಿಎಂ ಸ್ಟಾಲಿನ್

Update: 2025-11-19 13:56 IST

ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ (PTI)

ಚೆನ್ನೈ: ಮಧುರೈನಿಂದ ಕೊಯಂಬತ್ತೂರಿನವರೆಗೆ ಯೋಜಿಸಲಾಗಿದ್ದ ಮೆಟ್ರೊ ರೈಲು ನಿರ್ಮಾಣ ಪ್ರಸ್ತಾವವನ್ನು ಕೇಂದ್ರ ಸರಕಾರ ತಳ್ಳಿ ಹಾಕಿರುವ ಕ್ರಮವನ್ನು ‘ತಮಿಳುನಾಡು ಜನರ ವಿರುದ್ಧದ ಸೇಡಿನ ಕ್ರಮ’ ಎಂದು ಬುಧವಾರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಎಂ.ಕೆ.ಸ್ಟಾಲಿನ್, “ದೇವಾಲಯ ನಗರಿ ಮಧುರೈನಿಂದ ದಕ್ಷಿಣ ಭಾರತದ ಮ್ಯಾಂಚೆಸ್ಟರ್ ಎಂದೇ ಖ್ಯಾತವಾಗಿರುವ ಕೊಯಂಬತ್ತೂರಿಗೆ ಮೆಟ್ರೋ ರೈಲು ಯೋಜನೆ ಮಂಜೂರು ಮಾಡುವುದಿಲ್ಲ ಎಂದು ರಾಜ್ಯ ಸರಕಾರಕ್ಕೆ ಕೇಂದ್ರ ಸರಕಾರ ತಿಳಿಸಿದೆ. ಆದರೆ, ಬಿಜೆಪಿ ಆಡಳಿತಾರೂಢ ರಾಜ್ಯಗಳಲ್ಲಿನ ಇಂತಹುದೇ ನಗರಗಳಲ್ಲಿ ಇದೇ ಬಗೆಯ ಯೋಜನೆಗಳಿಗೆ ಅನುಮತಿ ನೀಡಿದೆ” ಎಂದು ಆರೋಪಿಸಿದ್ದಾರೆ.

“ದೇವಾಲಯ ನಗರಿ ಮಧುರೈನಿಂದ ದಕ್ಷಿಣ ಭಾರತದ ಮ್ಯಾಂಚೆಸ್ಟರ್ ಎಂದೇ ಖ್ಯಾತವಾಗಿರುವ ಕೊಯಂಬತ್ತೂರಿಗೆ ಯೋಜಿಸಲಾಗಿದ್ದ ಮೆಟ್ರೊ ರೈಲು ನಿರ್ಮಾಣ ಪ್ರಸ್ತಾವಕ್ಕೆ ಅನುಮತಿ ನೀಡಲು ಕೇಂದ್ರ ಸರಕಾರ ನಿರಾಕರಿಸಿದೆ. ಯಾವುದೇ ಸರಕಾರ ಜನರಿಗೆ ನಿಷ್ಪಕ್ಷಪಾತವಾಗಿ ಸೇವೆ ಸಲ್ಲಿಸಲು ಇರುತ್ತದೆ. ಹೀಗಿದ್ದೂ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಸೇಡು ತೀರಿಸಿಕೊಳ್ಳಲು ತಮಿಳುನಾಡಿನ ಪ್ರಜಾಸತ್ತಾತ್ಮಕ ಸರಕಾರವನ್ನು ಒಂದು ನೆಪ ಮಾಡಿಕೊಂಡಿದೆ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ವರದಿಗಳ ಪ್ರಕಾರ, 2011ರ ಜನಗಣತಿ ಅನ್ವಯ ಕನಿಷ್ಠ 20 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ನಗರಗಳ ನಗರಾಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರಕಾರದ ನೆರವು ಒದಗಿಸಲು 2017ರ ಮೆಟ್ರೊ ರೈಲು ನೀತಿ ನಿರ್ಬಂಧಿಸುತ್ತದೆ ಎಂದು ಉಲ್ಲೇಖಿಸಿ, ದ್ವಿತೀಯ ದರ್ಜೆಯ ನಗರಗಳಲ್ಲಿ ಮೆಟ್ರೊ ನಿರ್ಮಿಸಲು ತಮಿಳುನಾಡು ಸರಕಾರ ಮಂಡಿಸಿದ್ದ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ತಿರಸ್ಕರಿಸಿದೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News