×
Ad

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 158 ರೂ. ಕಡಿತ; ಇಂದಿನಿಂದಲೇ ಪರಿಷ್ಕೃತ ದರ ಜಾರಿ

Update: 2023-09-01 11:50 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಸಾರ್ವಜನಿಕ ರಂಗದ ತೈಲ ಮಾರುಕಟ್ಟೆ ಕಂಪೆನಿಗಳು ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ರೂ. 158 ಕಡಿತಗೊಳಿಸಿವೆ. ಈ ಪರಿಷ್ಕೃತ ದರಗಳು ಇಂದಿನಿಂದ ಜಾರಿಗೆ ಬರಲಿವೆ.

ದಿಲ್ಲಿಯಲ್ಲಿ 19ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರ ರೂ. 1,522 ಆಗಲಿದೆ.

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ರೂ. 200 ಕಡಿತಗೊಳಿಸಿತ್ತು.

ಆಗಸ್ಟ್‌ ತಿಂಗಳಿನಲ್ಲಿ ತೈಲ ಮಾರುಕಟ್ಟೆ ಕಂಪೆನಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ರೂ 99.75ರಷ್ಟು ಕಡಿತಗೊಳಿಸಿದ್ದರೆ, ಜುಲೈನಲ್ಲಿ ಸಿಲಿಂಡರ್‌ ಬೆಲೆ ರೂ. 7 ಏರಿಕೆ ಮಾಡಲಾಗಿತ್ತು.

ಮೇ ತಿಂಗಳಿನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ದರ ರೂ. 172 ಇಳಿಸಲಾಗಿದ್ದರೆ ಜೂನ್‌ ತಿಂಗಳಿನಲ್ಲಿ ರೂ. 83 ಇಳಿಕೆ ಮಾಡಲಾಗಿತ್ತು. ಎಪ್ರಿಲ್‌ ತಿಂಗಳಿನಲ್ಲೂ ಬೆಲೆ ರೂ 91.50ರಷ್ಟು ಇಳಿಕೆಯಾಗಿತ್ತು.

ಈ ವರ್ಷದ ಮಾರ್ಚ್‌ ತಿಂಗಳಿನಲ್ಲಿ ತೈಲ ಮಾರುಕಟ್ಟೆ ಕಂಪೆನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ರೂ 350.50 ರಷ್ಟು ಏರಿಕೆ ಮಾಡಿದ್ದವು ಹಾಗೂ ಗೃಹಬಳಕೆಯ ಸಿಲಿಂಡರ್‌ಗಳ ಬೆಲೆಯನ್ನು ರೂ. 50 ಏರಿಸಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News