×
Ad

ʼಮೋದಿ ದುರ್ಬಲ ಪ್ರಧಾನಿʼ : H-1B ವೀಸಾಗಳಿಗೆ ಟ್ರಂಪ್ ಒಂದು ಲಕ್ಷ ಡಾಲರ್ ಶುಲ್ಕ ಘೋಷಣೆ ಬೆನ್ನಲ್ಲೆ ಕಾಂಗ್ರೆಸ್ ಟೀಕೆ

Update: 2025-09-20 16:10 IST

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (File Photo: ANI)

ಹೊಸದಿಲ್ಲಿ: H-1B ವೀಸಾಗಳಿಗೆ ವಾರ್ಷಿಕ ಒಂದು ಲಕ್ಷ ಡಾಲರ್ ಶುಲ್ಕವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ಬೆನ್ನಲ್ಲೆ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ದುರ್ಬಲ ಪ್ರಧಾನಿ ಎಂದು ಟೀಕಿಸಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಕುರಿತು ಪ್ರಧಾನಿ ಮೋದಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ನಿರ್ಧಾರದಿಂದ ಹೆಚ್ಚು ಸಂಕಷ್ಟ ಎದುರಿಸುವವರು ಭಾರತೀಯರು, H-1B ವೀಸಾ ಹೊಂದಿರುವವರಲ್ಲಿ ಶೇಕಡಾ 70ರಷ್ಟು ಭಾರತೀಯರಿದ್ದು, ಅವರಿಗೆ ಇದು ಅತ್ಯಂತ ದೊಡ್ಡ ಹೊಡೆತವಾಗಿದೆ ಎಂದು ಹೇಳಿದರು.

ಡೊನಾಲ್ಡ್ ಟ್ರಂಪ್ ಅವರಿಂದ ಹುಟ್ಟುಹಬ್ಬದ ಕರೆ ನಂತರ ಪ್ರಧಾನಿ ಮೋದಿ ಸ್ವೀಕರಿಸಿದ ಉಡುಗೊರೆ ಭಾರತೀಯರಿಗೆ ನೋವುಂಟು ಮಾಡಿದೆ ಎಂದು ಖರ್ಗೆ ಹೇಳಿದರು.

ನಿಮ್ಮ 'ಅಬ್ಕಿ ಬಾರ್, ಟ್ರಂಪ್ ಸರಕಾರ' ದಿಂದ ಹುಟ್ಟುಹಬ್ಬದ ರಿಟರ್ನ್ ಉಡುಗೊರೆಗಳು, H-1B ವೀಸಾಗಳ ಮೇಲೆ ಒಂದು ಲಕ್ಷ ಡಾಲರ್ ಶುಲ್ಕ ಘೋಷಿಸಿರುವುದರಿಂದ ಭಾರತೀಯ ಐಟಿ ಉದ್ಯೋಗಿಗಳ ಮೇಲೆ ಅತ್ಯಂತ ಕಠಿಣ ಪರಿಣಾಮ ಬೀರುತ್ತದೆ ಎಂದು ಖರ್ಗೆ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಹೇಳಿದ್ದಾರೆ.

H-1B ವೀಸಾ ಹೊಂದಿರುವವರಲ್ಲಿ ಶೇಕಡಾ 70 ರಷ್ಟು ಭಾರತೀಯರು, ಈಗಾಗಲೇ ಶೇಕಡಾ 50 ರಷ್ಟು ಸುಂಕವನ್ನು ಕೂಡ ಭಾರತದ ಮೇಲೆ ವಿಧಿಸಲಾಗಿದೆ. ಭಾರತಕ್ಕೆ ಈಗಾಗಲೇ 10 ವಲಯಗಳಲ್ಲಿ 2.17 ಲಕ್ಷ ಕೋಟಿ ರೂ. ನಷ್ಟವಾಗಿರುವ ಬಗ್ಗೆ ಅಂದಾಜಿಸಲಾಗಿದೆ ಎಂದು ಖರ್ಗೆ ಹೇಳಿದ್ದಾರೆ.

ಕಾಂಗ್ರೆಸ್ ಸಂಸದ, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈ ಕುರಿತು ಪ್ರತಿಕ್ರಿಯಿಸಿ, ಪ್ರಧಾನಿ ಮೋದಿಯನ್ನು "ದುರ್ಬಲ ಪ್ರಧಾನಿ" ಎಂದು ಟೀಕಿಸಿದ್ದಾರೆ.

ಭಾರತ ದುರ್ಬಲ ಪ್ರಧಾನಿಯನ್ನು ಹೊಂದಿದೆ ಎಂದು ನಾನು ಮತ್ತೆ ಹೇಳುತ್ತೇನೆ ಎಂದು ರಾಹುಲ್ ಗಾಂಧಿ 2017ರ ಪೋಸ್ಟ್ ಅನ್ನು ಉಲ್ಲೇಖಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೋದಿ ಅವರ ಮೌನ ಮತ್ತು ನಿಷ್ಕ್ರಿಯತೆಯು ದೇಶದ ರಾಷ್ಟ್ರೀಯ ಹಿತಾಸಕ್ತಿಗೆ ಅಡ್ಡಿಯುಂಟುಮಾಡುತ್ತಿದೆ ಎಂದು ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News