×
Ad

ಕಾಂಗ್ರೆಸ್ ನಾಯಕತ್ವವೇ ಪಕ್ಷದ ಸೋಲಿಗೆ ಕಾರಣ: ಅಮಿತ್ ಶಾ ತಿರುಗೇಟು

Update: 2025-12-11 08:43 IST

PC: x.com/ndtvfeed

ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ಸೋಲಿಗೆ ಮತದಾನ ಅಕ್ರಮಗಳು ಕಾರಣವಲ್ಲ; ಬದಲಾಗಿ ನಾಯಕತ್ವದ ವೈಫಲ್ಯ ಮುಖ್ಯ ಕಾರಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತಿನ ಚಾಟಿ ಬೀಸಿದ್ದಾರೆ. ವಿರೋಧ ಪಕ್ಷಗಳ ವೋಟ್ ಚೋರಿ ಆರೋಪಗಳನ್ನು ಬಲವಾಗಿ ನಿರಾಕರಿಸಿದ ಅವರು, ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಬದಲು ಮತಗಳ್ಳತನದ ಸುಳ್ಳು ಆರೋಪವನ್ನು ಹರಡುತ್ತಿದೆ ಎಂದು ಹೇಳಿದರು.

"ಮುಂದೊಂದು ದಿನ ಕಾಂಗ್ರೆಸ್ ಕಾರ್ಯಕರ್ತರೇ ತಮ್ಮ ನಾಯಕತ್ವವನ್ನು ಪ್ರಶ್ನಿಸಲಿದ್ದಾರೆ" ಎಂದು ಚುನಾವಣಾ ಸುಧಾರಣೆಗಳ ಬಗೆಗಿನ ಲೋಕಸಭಾ ಚರ್ಚೆಯ ವೇಳೆ ಅಭಿಪ್ರಾಯಪಟ್ಟರು.

ಆರೆಸ್ಸೆಸ್ ಸರ್ಕಾರಿ ಸಂಸ್ಥೆಗಳನ್ನು ವಶಪಡಿಸಿಕೊಂಡಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, "ಆರೆಸ್ಸೆಸ್ ಸಿದ್ಧಾಂತದ ವ್ಯಕ್ತಿಗಳು ಸಂವಿಧಾನಾತ್ಮಕ ಹುದ್ದೆಗಳನ್ನು ಹೊಂದುವುದನ್ನುನಿಷೇಧಿಸುವ ಕಾನೂನು ದೇಶದಲ್ಲಿದೆಯೇ? ಎಂದು ಖಾರವಾಗಿ ಪ್ರಶ್ನಿಸಿದರು. "ಪ್ರಧಾನಿ ಆರೆಸ್ಸೆಸ್ ನವರು ಅಂತೆಯೇ ಗೃಹಸಚಿವರು ಕೂಡಾ" ಎಂದು ಸಮರ್ಥಿಸಿಕೊಂಡರು.

"ರಾಷ್ಟ್ರಕ್ಕಾಗಿ ಬದುಕುವುದು ಮತ್ತು ರಾಷ್ಟ್ರಕ್ಕಾಗಿ ಸಾಯುವುದೇ ಆರೆಸ್ಸೆಸ್ ಸಿದ್ಧಾಂತ. ಭಾರತವನ್ನು ಮತ್ತಷ್ಟು ಸದೃಢ ಮತ್ತು ಸಮೃದ್ಧಗೊಳಿಸುವುದೇ ಅದರ ಉದ್ದೇಶ" ಎಂದ ಅವರು, ನಾನು 10 ವರ್ಷದವನಿದ್ದಾಗಲೇ  "ಅಸ್ಸಾಂ ಕಿ ಗಲಿಯಾನ್ ಸುನಿ ಹೇ, ಇಂದಿರಾ ಗಾಂಧಿ ಖೂನಿ ಹೇ" ಎಂಬ ಘೋಷಣೆ ಕೂಗಿದ್ದೆ ಎಂದು ಬಾಲ್ಯವನ್ನು ನೆನಪಿಸಿಕೊಂಡರು.

ವಿರೋಧ ಪಕ್ಷಗಳು ಹಿನ್ನಡೆ ಅನುಭವಿಸಿದಾಗಲೆಲ್ಲ ಬೇರೆಯವರನ್ನು ದೂಷಿಸುತ್ತವೆ ಎಂದು ತಿರುಗೇಟು ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News