×
Ad

12:30 ತಾಸು ಶಸ್ತ್ರ ಚಿಕಿತ್ಸೆ ನಡೆಸಿ ಸಯಾಮಿ ಮಕ್ಕಳನ್ನು ಬೇರ್ಪಡಿಸಿದ ಏಮ್ಸ್‌ ವೈದ್ಯರು

Update: 2023-07-27 20:37 IST

Photo credit: PTI

ಹೊಸದಿಲ್ಲಿ: ದಿಲ್ಲಿಯ ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS)ನಲ್ಲಿ ಸುಮಾರು 12 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಸಯಾಮಿ ಮಕ್ಕಳನ್ನು ಯಶಸ್ವಿಯಾಗಿ ವೈದ್ಯರು ಬೇರ್ಪಡಿಸಿದ್ದಾರೆ.

ಎದೆ ಮತ್ತು ಹೊಟ್ಟೆ ಸೇರಿಕೊಂಡು ಹುಟ್ಟಿದ್ದ ಸಯಾಮಿ ಅವಳಿಗಳಾದ ಒಂದು ವರ್ಷದ ರಿದ್ಧಿ ಮತ್ತು ಸಿದ್ದಿ ಎಂಬ ಪುಟಾಣಿಗಳನ್ನು ಯಶಸ್ವಿಯಾಗಿ ಬೇರ್ಪಡಿಸಲಾಗಿದೆ. ಬಳಿಕ, ಮಕ್ಕಳ ಒಂದನೇ ವರ್ಷದ ಹುಟ್ಟುಹಬ್ಬವನ್ನು ಆಸ್ಪತ್ರೆಯಲ್ಲೇ ಆಚರಿಸಲಾಗಿದೆ.

ಉತ್ತರಪ್ರದೇಶದ ಬರೇಲ್ವಿಯ ಮಹಿಳೆಯ ಹೊಟ್ಟೆಯಲ್ಲಿ ಸಯಾಮಿ (thoraco-omphalopagus conjoined twins) ಅವಳಿಗಳಿರುವುದು ಗರ್ಭಧಾರಣೆಯ ನಾಲ್ಕನೇ ತಿಂಗಳಲ್ಲೇ ಗುರುತಿಸಲಾಗಿತ್ತು. ನಂತರ ಆಕೆಯನ್ನು AIIMS ಗೆ ದಾಖಲಿಸಲಾಯಿತು. 2022 ರ ಜುಲೈ 7ರಂದು ಸಯಾಮಿ ಹೆಣ್ಣುಮಕ್ಕಳಿಗೆ ಜನನ ನೀಡಿದ್ದು, ಮಕ್ಕಳಿಗೆ 11 ತಿಂಗಳು ಪೂರ್ತಿಯಾದಾಗ ಚಿಕಿತ್ಸೆಯಿಂದ ಮಕ್ಕಳನ್ನು ಬೇರ್ಪಡಿಸಲಾಗಿದೆ ಎಂದು ಏಮ್ಸ್‌ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಮಿನು ಬಾಜ್‌ಪೇಯ್ ತಿಳಿಸಿದ್ದಾರೆ.

ಮಕ್ಕಳ ಪಕ್ಕೆಲುಬು, ಹೃದಯ ಹಾಗೂ ಯಕೃತ್‌ ಒಂದಕ್ಕೊಂದು ತೀರಾ ಸಮೀಪದಲ್ಲಿತ್ತು. 9 ಗಂಟೆಗಳಲ್ಲಿ ಶಸ್ತ್ರ ಚಿಕಿತ್ಸೆ ಮುಗಿದಿದೆಯಾದರೂ, ಅರಿವಳಿಕೆಗೆ ಮೂರು ತಾಸು ಬೇಕಾಗಿದ್ದರಿಂದ ಶಸ್ತ್ರ ಚಿಕಿತ್ಸೆಯ ಪ್ರಕ್ರಿಯೆ ಮುಗಿಯಲು 12:30 ತಾಸು ಹಿಡಿಯಿತು ಎಂದು ವೈದ್ಯರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News