×
Ad

31.75 ಲ.ರೂ.ಮೌಲ್ಯದ ನಿಷೇಧಿತ ಕೆಮ್ಮಿನ ಸಿರಪ್‌ಗಳ ಅಕ್ರಮ ದಾಸ್ತಾನು| ಮಹಾರಾಷ್ಟ್ರ ಪೊಲೀಸರಿಂದ ಇಬ್ಬರ ಬಂಧನ

Update: 2025-02-02 22:06 IST

ಸಾಂದರ್ಭಿಕ ಚಿತ್ರ | PC : freepik. com

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ 31.75 ಲಕ್ಷ ರೂ.ಮೌಲ್ಯದ ಎರಡು ನಿಷೇಧಿತ ಬ್ರಾಂಡ್‌ಗಳ ಕೆಮ್ಮಿನ ಸಿರಪ್‌ಗಳನ್ನು ಅಕ್ರಮವಾಗಿ ದಾಸ್ತಾನಿರಿಸಿದ ಆರೋಪದಲ್ಲಿ ಇಬ್ಬರನ್ನು ರವಿವಾರ ಪೊಲೀಸರು ಬಂಧಿಸಿದ್ದಾರೆ.

ಮಾದಕದ್ರವ್ಯ ಮಿಶ್ರಿತ ಈ ಕೆಮ್ಮಿನ ಸಿರಪ್‌ಗಳನ್ನು ಅಮಲುಪದಾರ್ಥವಾಗಿಯೂ ಬಳಸಲಾಗುತ್ತಿದ್ದು, ಆರೋಗ್ಯ ಮಾರಕವಾಗಿವೆಯೆಂದು ಪೊಲೀಸರು ತಿಳಿಸಿದ್ದಾರೆ.

ಸೂಕ್ತ ಪರವಾನಿಗೆಯಿಲ್ಲದೆ ಕೆಮ್ಮಿನ ಸಿರಫ್‌ಗಳ ಮಾರಾಟ ನಿಷಿದ್ಧವೆಂದು ಅರಿತಿದ್ದರೂ ಆರೋಪಿಗಳು ಈ ಔಷಧಿಗಳನ್ನು ಬೃಹತ್ ಪ್ರಮಾಣದಲ್ಲಿ ದಾಸ್ತಾನಿರಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.

ನಿಷೇಧಿತ ಕೆಮ್ಮಿನ ಸಿರಪ್‌ಗಳ ದಾಸ್ತಾನಿಗೆ ಸಂಬಂಧಿಸಿ ತಮಗೆ ದೊರೆತ ಮಾಹಿತಿಯನ್ನು ಆಧರಿಸಿ ಜನವರಿ 31ರಂದು ಭಿವಂಡಿ ಪಟ್ಟಣದಲ್ಲಿಕಾರ್ಯಾಚರಣೆ ನಡೆಸಿದ ಪೊಲೀಸರು ಐವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಕ್ರೈಂ ಬ್ರಾಂಚ್ ಪೊಲೀಸರು 17,640 ಕಫ್ ಸಿರಪ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಕಫ್ ಸಿರಪ್‌ಗಳಲ್ಲಿ ಕೊಡೈನ್ ಫಾಸ್ಪೇಟ್ ಮತ್ತಿತರ ರಾಸಾಯನಿಕಗಳನ್ನು ಒಳಗೊಂಡಿತ್ತೆಂದು ಮತ್ತು ಅವುಗಳನ್ನು ಮಾರಾಟಕ್ಕಾಗಿ ದಾಸ್ತಾನಿರಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿಗಳು ಎಲ್ಲಿಂದ ಈ ದಾಸ್ತಾನನ್ನು ಪಡೆದುಕೊಂಡಿದ್ದಾರೆ ಹಾಗೂ ಅದನ್ನು ಅವರು ಯಾರಿಗೆ ಮಾರಲು ಹೊರಟಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದರ ಹಿಂದೆ ದೊಡ್ಡ ಜಾಲವೇ ಇರುವ ಶಂಕೆಯಿದ್ದು, ಇನ್ನಷ್ಟು ಮಂದಿಯ ಬಂಧನವಾಗುವ ಸಾಧ್ಯತೆಯಿದೆಯೆಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News