×
Ad

ಗೋಹತ್ಯೆ ಸಾರ್ವಜನಿಕ ಶಾಂತಿಯ ಮೇಲೆ ಗಂಭೀರ ಪರಿಣಾಮ ಬೀರಬಹುದು: ಪಂಜಾಬ್-ಹರ್ಯಾಣ ಹೈಕೋರ್ಟ್

ಭಾರತದಲ್ಲಿ ಗೋವುಗಳಿಗೆ ವಿಶೇಷ ಸ್ಥಾನಮಾನ ಇದೆ ಎಂದ ನ್ಯಾಯಾಲಯ

Update: 2025-08-26 14:04 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ : ವಧೆಗಾಗಿ ಗೋವುಗಳನ್ನು ಸಾಗಿಸುತ್ತಿದ್ದ ಆರೋಪ ಹೊತ್ತಿರುವ ಮೇವಾತ್ ನ ವ್ಯಕ್ತಿಯೋರ್ವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ವಜಾಗೊಳಿಸಿದೆ. ಇದು ಸಾರ್ವಜನಿಕ ಶಾಂತಿಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ಹೇಳಿದೆ.

ಭಾರತೀಯ ಸಮಾಜದಲ್ಲಿ ಹಸು ವಿಶಿಷ್ಟ ಸ್ಥಾನಮಾನವನ್ನು ಹೊಂದಿದೆ. ಈ ಪ್ರಕರಣ ಕಾನೂನು ಮಾತ್ರವಲ್ಲ, ಭಾವನಾತ್ಮಕ ಹಾಗೂ ಸಾಂಸ್ಕೃತಿಕ ಅಂಶಗಳನ್ನೂ ಒಳಗೊಂಡಿದೆ. ನಮ್ಮಂತಹ ಬಹು ಸಂಸ್ಕೃತಿಯ ಸಮಾಜದಲ್ಲಿ ಕೆಲ ಖಾಸಗಿ ಕೃತ್ಯಗಳು ಜನರ ಆಳವಾದ ನಂಬಿಕೆಗಳನ್ನು ಅವಮಾನಿಸಿದಾಗ ಸಾರ್ವಜನಿಕ ಶಾಂತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತವೆ ಎಂದು ನ್ಯಾಯಮೂರ್ತಿ ಸಂದೀಪ್ ಮೌದ್ಗಿಲ್ ಅವರ ಪೀಠವು ಹೇಳಿದೆ.

ಅರ್ಜಿದಾರರಾದ ಆಸಿಫ್ ಹಾಗೂ ಮತ್ತಿಬ್ಬರ ವಿರುದ್ಧ ಎಪ್ರಿಲ್ 3, 2025 ರಂದು ನೂಹ್‌ನ ಸದರ್ ಪೊಲೀಸ್ ಠಾಣೆಯಲ್ಲಿ ಹರ್ಯಾಣ ಗೋವಂಶ ಸಂರಕ್ಷಣ ಮತ್ತು ಗೌಸಂವರ್ಧನ ಕಾಯ್ದೆ ಮತ್ತು ಕ್ರೌರ್ಯ ತಡೆ ಕಾಯ್ದೆಯಡಿ ಎಫ್ಐಆರ್ ದಾಖಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News