75 ವರ್ಷಗಳ ವಯೋಮಿತಿಗೆ ಸಿಪಿಎಂ ಬದ್ಧ : ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್
ಎಂ.ವಿ.ಗೋವಿಂದನ್ | PC : X \ @GovindanMaster
ಕೊಲ್ಲಂ: ಕೇರಳ ರಾಜ್ಯ ಸಮಿತಿಯ ಸದಸ್ಯರ 75 ವರ್ಷಗಳ ವಯೋಮಿತಿಯನ್ನು ಪಕ್ಷವು ಕಟ್ಟನಿಟ್ಟಾಗಿ ಪಾಲಿಸಲಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಘೋಷಿಸಿದ್ದಾರೆ.
ನಾಳೆ(ಬುಧವಾರ)ಯಿಂದ ಕೊಲ್ಲಂನಲ್ಲಿ ನಡೆಯಲಿರುವ ಸಿಪಿಎಂ ರಾಜ್ಯ ಸಮಾವೇಶಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಸದಸ್ಯರು ಮದ್ಯಪಾನದಿಂದ ದೂರ ಉಳಿಯಬೇಕು ಹಾಗೂ ಮದ್ಯಪಾನ ಮಾಡುವ ಯಾವುದೇ ಸದಸ್ಯರನ್ನು ಪಕ್ಷದಿಂದ ಉಚ್ಚಾಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಸಮಿತಿ ಸದಸ್ಯರ ವಯೋಮಿತಿಯ ಕುರಿತು ಕೇಳಲಾದ ಪ್ರಶ್ನೆಮಗೆ ಉತ್ತರಿಸಿದ ಅವರು, ಮುಖ್ಯಮಂತ್ರಿಗೆ ಮಾತ್ರ ಈ ವಯೋಮಿತಿಯಿಂದ ವಿನಾಯಿತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು. ರಾಜ್ಯ ಸಮಿತಿಯ ಸದಸ್ಯ ಬಲದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
ರಾಜ್ಯ ಸಮಿತಿಯಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಳದ ಕುರಿತು ಕೇಳಲಾದ ಪ್ರಶ್ನೆಗೆ ‘ನೋಡೋಣ’ ಎಂದಷ್ಟೆ ಅವರು ಉತ್ತರಿಸಿದರು.