×
Ad

ಜಮ್ಮು ಕಾಶ್ಮೀರ | ಗುಂಡಿನ ಕಾಳಗ ; ಸಿ ಆರ್‌ ಪಿ ಎಫ್‌ ಇನ್ಸ್ಪೆಕ್ಟರ್ ಮೃತ್ಯು

Update: 2024-08-19 22:57 IST

ಸಾಂದರ್ಭಿಕ ಚಿತ್ರ

ಜಮ್ಮು : ಜಮ್ಮು ಹಾಗೂ ಕಾಶ್ಮೀರದ ಉಧಮ್ಪುರ ಜಿಲ್ಲೆಯಲ್ಲಿ ಗಸ್ತು ನಡೆಸುತ್ತಿದ್ದ ಜಮ್ಮು-ಕಾಶ್ಮೀರ ಹಾಗೂ ಸಿ ಆರ್‌ ಪಿ ಎಫ್‌ ನ ತಂಡದ ಮೇಲೆ ಶಂಕಿತ ಉಗ್ರರು ಗುಂಡು ಹಾರಿಸಿದ ಪರಿಣಾಮ ಸಿ ಆರ್‌ ಪಿ ಎಫ್‌ ನ ಇನ್ಸ್ಪೆಕ್ಟರ್ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಸಂತಗಢದ ದುದು ಪೊಲೀಸ್ ಠಾಣಾ ವ್ಯಾಪ್ತಿಯ ಚಿಲ್ ಪ್ರದೇಶದಲ್ಲಿ ಸಂಜೆ 3.30ಕ್ಕೆ ಜಮ್ಮು ಹಾಗೂ ಕಾಶ್ಮೀರ ಪೊಲೀಸರು, ಸಿ ಆರ್‌ ಪಿ ಎಫ್‌ ನ ಜಂಟಿ ತಂಡ ಗಸ್ತು ನಡೆಸುತ್ತಿತ್ತು. ಈ ಸಂದರ್ಭ ಶಂಕಿತ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದರು. ಇದರಿಂದ ಗುಂಡಿನ ಕಾಳಗ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಗುಂಡಿನ ಕಾಳಗದಲ್ಲಿ ಸಿಆರ್ಪಿಎಫ್ನ 187ನೇ ಬೆಟಾಲಿಯನ್ನ ಜಿ ಕಂಪೆನಿಗೆ ಸೇರಿದ ಇನ್ಸ್ಪೆಕ್ಟರ್ ಕುಲದೀಪ್ ಗುಂಡು ತಗುಲಿ ಗಂಭೀರ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭ ದಾರಿ ಮಧ್ಯೆ ಮೃತಪಟ್ಟರು ಎಂದು ಅವರು ತಿಳಿಸಿದ್ದಾರೆ.

ಈ ಘಟನೆ ಕುರಿತಂತೆ ಉಧಮಪುರ ಪೊಲೀಸರು ತಮ್ಮ ಅಧಿಕೃತ ‘ಎಕ್ಸ್’ ಹ್ಯಾಂಡಲ್ ನಲ್ಲಿ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News