×
Ad

ಸಿಎಸ್‌ಐಆರ್-ನೆಟ್ ಪರೀಕ್ಷೆ ವಂಚನೆ ಜಾಲ ಬಯಲಿಗೆ | 7 ಮಂದಿಯ ಬಂಧನ

Update: 2024-07-27 21:48 IST

ಲಕ್ನೋ : ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್)ಯ ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ (ನೆಟ್) ಉತ್ತರಗಳನ್ನು ಒದಗಿಸುತ್ತಿದ್ದವರನ್ನು ಒದಗಿಸುತ್ತಿದ್ದ ಜಾಲದಲ್ಲಿ ಶಾಮೀಲಾಗಿದ್ದ ಜಾಲವೊಂದನ್ನು ರಾಜ್ಯದ ಉತ್ತರಪ್ರದೇಶದ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಭೇದಿಸಿದ್ದು, ವಿವಿಯ ಪ್ರಮುಖ ಸಿಬ್ಬಂದಿ ಹಾಗೂ ನಾಲ್ವರು ಅರ್ಜಿದಾರರು ಸೇರಿದಂತೆ ಏಳು ಮಂದಿಯನ್ನು ಬಂಧಿಸಿದೆ.

ಪ್ರಶ್ನಾಪತ್ರಿಕೆಗಳಿಗೆ ಉತ್ತರಿಸಲು ಆನ್‌ಲೈನ್ ಸಾಲ್ವರ್‌ಗಳನ್ನು ಒದಗಿಸಿದ್ದಕ್ಕಾಗಿ ಗ್ಯಾಂಗ್‌ನ ಸದಸ್ಯರು ದೊಡ್ಡ ಮೊತ್ತದ ಹಣವನ್ನು ವಸೂಲಿ ಮಾಡುತ್ತಿದ್ದರು ಎಂದು ಎಸ್‌ಟಿಎಫ್ ಪತ್ರಿಕಾ ಹೇಳಿಕೆಯೊಂದರಲ್ಲಿ ಆಪಾದಿಸಿದೆ.

ಸಹಾಯಕ ಪೊಲೀಸ್ ಆಧೀಕ್ಷಕ ಬ್ರಿಜೇಶ್ ಕುಮಾರ್‌ಸಿಂಗ್ ಅವರಿಗೆ ದೊರೆತ ಗುಪ್ತಚರ ಮಾಹಿತಿಯನ್ನು ಆಧರಿಸಿ ಎಸ್‌ಟಿಎಫ್ ತಂಡವ ಎಸ್‌ಎಸ್‌ಐಆರ್-ನೆಟ್ ಪರೀಕ್ಷೆಯ ಸಂದರ್ಭ ಮೀರತ್‌ನ ಸುಭಾರ್ತಿ ವಿವಿಯಲ್ಲಿರುವ ಕಂಪ್ಯೂಟರ್ ಪ್ರಯೋಗಾಲಯದ ಕಾನೂನು ವಿಭಾಗದ ಮೇಲೆ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿತ್ತು.

ತಂಡವು ಆರೋಪಿಗಳಿಂದ ಲ್ಯಾಪ್‌ಟಾಪ್, ಐದು ಸಿಪಿಯು, ಎರಡು ಪೆನ್‌ಡ್ರೈವ್‌ಗಳು, ನಾಲ್ಕು ಸಿಎಸ್‌ಐಆರ್-ಯುಜಿಸಿ ನೆಟ್ ಪರೀಕ್ಷೆಯ ಗುರುತಿನ ಚೀಟಿಗಳು, ಮೂರು ಮೊಬೈಲ್ ಫೋನ್‌ಗಳು, ಮೂರು ಆಧಾರ್ ಕಾರ್ಡ್‌ಗಳು, ಎರಡು ಪಾನ್ ಕಾರ್ಡ್‌ಗಳು ಹಾಗೂ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಬಂಧಿತ ಆರೋಪಿಗಳನ್ನು ಮೀರತ್‌ ನ ಸುಭಾರ್ತಿ ವಿವಿಯ ಐಟಿ ಮ್ಯಾನೇಜರ್ ಅರುಣ್ ಶರ್ಮಾ, ಕಂಪ್ಯೂಟರ್ ಲ್ಯಾಬ್ ಸಹಾಯಕ ವಿನೀತ್ ಕುಮಾರ್, ಆನ್‌ಲೈನ್ ಪರೀಕ್ಷೆಯನ್ನು ನಡೆಸುವ ಜವಾಬ್ದಾರಿ ಹೊಂದಿರುವ ಎನ್‌ಎಸ್‌ಇಐಟಿಯ ಸರ್ವರ್ ಆಪರೇಟರ್ ಅಂಕುರ್ ಸೈನಿ ಎಂದು ಗುರುತಿಸಲಾಗಿದೆ. ಪರೀಕ್ಷೆಯ ಅಭ್ಯರ್ಥಿಗಳಾದ ಅಂಕಿತ್, ತಮನ್ನಾ, ಮೋನಿಕಾ ಹಾಗೂ ಜ್ಯೋತಿ ಅವರನ್ನು ಬಂಧಿಸಲಾಗಿದ್ದು, ಇವರೆಲ್ಲರೂ ಹರ್ಯಾಣದವರಾಗಿದ್ದಾರೆ.

ಆರೋಪಿ ಅರುಣ್ ಶರ್ಮಾ ತನ್ನ ಕೊಠಡಿಯಲ್ಲಿ ಪರ್ಯಾಯ ವ್ಯವಸ್ಥೆಯನ್ನು ಸ್ಥಾಪಿಸಿಕೊಂಡಿದ್ದು, ಎನ್‌ಎಸ್‌ಇಐಟಿ ಕಂಪೆನಿಯ ಸರ್ವರ್ ಆಪರೇಟರ್ ಅಂಕುರ್‌ಸೈನಿ ಹಾಗೂ ಲ್ಯಾಬ್ ಸಹಾಯಕ ವಿನೀತ್ ಕುಮಾರ್ ನೆರವಿನೊಂದಿಗೆ ಪರೀಕ್ಷೆಯ ಸರ್ವರ್‌ ಗೆ ಅನಧಿಕೃತವಾಗಿ ಸಂಪರ್ಕ ಸಾಧಿಸಿಕೊಂಡಿದ್ದ.

ಈ ಪರೀಕ್ಷೆಯ ಫೈಲ್‌ಗಳನ್ನು ಅರುಣ್ ಶರ್ಮಾ ಹರ್ಯಾಣದಲ್ಲಿರುವ ತನ್ನ ಸಹಚರ ಅಜಯ್ ಎಂಬಾತನಿಗೆ ಕಳುಹಿಸುತ್ತಿದ್ದ. ಆತ ಪರೀಕ್ಷೆಗಳನ್ನು ಪೂರ್ಣಗೊಳಿಸಲು ಉತ್ತರ ಒದಗಿಸುವವರನ್ನು ಸಂಘಟಿಸುತ್ತಿದ್ದ. ಈ ಉತ್ತರಗಳನ್ನು ಆತ ತನಗೆ ಹಣ ನೀಡಿದ ಅಭ್ಯರ್ಥಿಗಳಿಗೆ ಕಳುಹಿಸಿಕೊಡುತ್ತಿದ್ದನೆಂದು ಎನ್‌ಎಸ್‌ಇಟಿ ಆಪಾದಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News