×
Ad

ದಾಂತೆವಾಡ: ನಕ್ಸಲರು ಇರಿಸಿದ್ದ ಐಇಡಿ ಸ್ಫೋಟ; ಇಬ್ಬರು CRPF ಯೋಧರಿಗೆ ಗಾಯ

Update: 2023-12-02 20:34 IST

Photo : PTI 

ದಾಂತೆವಾಡ: ಚತ್ತೀಸ್ ಗಡದ ದಾಂತೆವಾಡ ಜಿಲ್ಲೆಯಲ್ಲಿ ಶನಿವಾರ ಶಂಕಿತ ನಕ್ಸಲೀಯರು ಹುದುಗಿಸಿಟ್ಟಿದ್ದ ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟಗೊಂಡು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ.

ರಸೂರ್ ಪೊಲೀಸ್ ಠಾಣಾ ವಾಪ್ತಿಯ ಇಂದ್ರಾವತಿಯಲ್ಲಿ ಸೇತುವೆಯೊಂದರ ಸಮೀಪ ಮಾವೋವಾದಿ ಬ್ಯಾನರ್ ಒಂದರಲ್ಲಿ ಅಡಗಿಸಿಟ್ಟಿದ್ದ ಸ್ಫೋಟಕವನ್ನು ಭದ್ರತಾ ಸಿಬ್ಬಂದಿ ನಿಷ್ಕ್ರಿಯಗೊಳಿಸುತ್ತಿದ್ದಾಗ ಈ ಘಟನೆ ಸಂಭವಿಸಿರುವುದಾಗಿ CRPF ಅಧಿಕಾರಿಗಳು ತಿಳಿಸಿದ್ದಾರೆ.

ಡಿಸೆಂಬರ್ 2ರಂದು ಆರಂಭಗೊಂಡ ತಮ್ಮ ‘ಜನತಾ ವಿಮೋಚನಾ ಗೆರಿಲ್ಲಾ ಸೇನಾ’(ಪಿಎಲ್ಜಿಎ) ಸಪ್ತಾಹದ ಭಾಗವಾಗಿ ಕೆಲವು ಬರ್ಸೂರ್ ಪಾಲ್ಲಿ ದಾರಿಯಲ್ಲಿ ನಕ್ಸಲರ ಚಲನವಲನ ಕಂಡುಬಂದಿರುವುದಾಗಿ ಸುಳಿವು ದೊರೆತ ಹಿನ್ನೆಲೆಯಲ್ಲಿ CRPF ನ 195ನೇ ಬೆಟಾಲಿಯನ್ ನ ತಂಡವೊಂದನ್ನು ಅಲ್ಲಿಗೆ ರವಾನಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ಸಾತ್ಧಾರ್‌ ಸೇತುವೆಯ ಬಳಿ ಮಾವೋವಾದಿ ಬ್ಯಾನರ್ ಹಾಗೂ ಅದರಲ್ಲಿ ಐಇಡಿಯನ್ನು ಹುದುಗಿಸಿಟ್ಟಿರುವುದನ್ನು ಪತ್ತೆಹಚ್ಚಿದ ಭದ್ರತಾ ಸಿಬ್ಬಂದಿ ಅದನ್ನು ನಿಷ್ಕ್ರಿಯಗೊಳಿಸಲು ಆರಂಭಿಸಿದರು. ಆದರೆ ಈ ಪ್ರಕ್ರಿಯೆಯ ನಡೆಯುತ್ತಿದ್ದಾಗಲೇ ಅದು ಸಫೋಟಿಸಿದ್ದು, ಇಬ್ಬರು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಗೊಂಡ CRPF ಯೋಧರನ್ನು ಚಿಕಿತ್ಸೆಗಾಗಿ ರಾಯ್ಪುರದ ಆಸ್ಪತ್ರೆಗೆ ಏರ್ಲಿಫ್ಟ್ ಮಾಡಲಾಗಿದೆ ಎಂದು ಅವರ ಉಹೇಳಿದ್ದಾರೆ. ನಕ್ಸಲರಿಗಾಗಿ ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿರುವುದಾಗಿ ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News