ದಿಲ್ಲಿ| ಬಾಂಗ್ಲಾದೇಶ ಹೈಕಮಿಶನ್‌ನಲ್ಲಿ ವೀಸಾ ನೀಡಿಕೆ ಸ್ಥಗಿತ
Update: 2025-12-22 23:00 IST
Photo Credit : ddnews.gov.in
ಹೊಸದಿಲ್ಲಿ, ಡಿ.22: ಹೊಸದಿಲ್ಲಿಯಲ್ಲಿರುವ ಬಾಂಗ್ಲಾದೇಶ ಹೈಕಮಿಶನ್‌ನಲ್ಲಿ ಕೌನ್ಸುಲರ್ ಸೇವೆಗಳು ಮತ್ತು ವೀಸಾ ನೀಡುವ ಸೇವೆಗಳನ್ನು ಮುಂದಿನ ಸೂಚನೆಯವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಬಾಂಗ್ಲಾದೇಶದ ಅಧಿಕಾರಿಗಳು ಸೋಮವಾರ ತಿಳಿಸಿದರು.
ಅನಿರೀಕ್ಷಿತ ಸನ್ನಿವೇಶಗಳ ಹಿನ್ನೆಲೆಯಲ್ಲಿ, ಹೈಕಮಿಶನ್‌ನ ಎಲ್ಲಾ ಕೌನ್ಸುಲರ್ ಕೆಲಸಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಬಾಂಗ್ಲಾದೇಶಿ ಪತ್ರಿಕೆ ‘ಪ್ರಥಮ್ ಅಲೊ’ ವರದಿ ಮಾಡಿದೆ.
ಹೊಸದಿಲ್ಲಿಯಲ್ಲಿ ನಡೆದ ಪ್ರತಿಭಟನೆಯ ಬಳಿಕ ಬಾಂಗ್ಲಾದೇಶ ಈ ಕ್ರಮ ತೆಗೆದುಕೊಂಡಿದೆ.
ಈ ವಾರದ ಆರಂಭದಲ್ಲಿ, ಭದ್ರತಾ ಬೆದರಿಕೆಯ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ನಗರಗಳಲ್ಲಿನ ತನ್ನ ವೀಸಾ ಸೇವೆಗಳನ್ನು ಭಾರತವು ಸ್ಥಗಿತಗೊಳಿಸಿತ್ತು.