ಶಶಿ ತರೂರ್ ವಿರುದ್ಧದ ಮಾನ ಹಾನಿ ಪ್ರಕರಣ ತಿರಸ್ಕರಿಸಿದ ದಿಲ್ಲಿ ನ್ಯಾಯಾಲಯ
ಶಶಿ ತರೂರ್ | PTI
ಹೊಸದಿಲ್ಲಿ : ಕಾಂಗ್ರೆಸ್ ಸಂಸದ ಶಶಿ ತರೂರ್ ವಿರುದ್ಧ ಮಾನ ಹಾನಿ ಆರೋಪಿಸಿ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಸಲ್ಲಿಸಿದ ಕ್ರಿಮಿನಲ್ ದೂರನ್ನು ದಿಲ್ಲಿ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ಪರಸ್ ದಲಾಲ್ ಅವರು ಶಶಿ ತರೂರ್ ಅವರಿಗೆ ಸಮನ್ಸ್ ನೀಡಲು ನಿರಾಕರಿಸಿದರು. ಅಲ್ಲದೆ, ದೂರಿನಲ್ಲಿ ಮಾನ ಹಾನಿಕರ ಹೇಳಿಕೆಯ ಯಾವುದೇ ಅಂಶಗಳು ಮೇಲ್ನೋಟಕ್ಕೆ ಕಂಡು ಬಂದಿಲ್ಲ ಎಂದು ತಿಳಿಸಿದರು.
ರಾಷ್ಟ್ರೀಯ ಸುದ್ದಿ ವಾಹಿನಿಯಲ್ಲಿ ಶಶಿ ತರೂರ್ ಅವರು ಸುಳ್ಳು ಹಾಗೂ ಅವಮಾನಕರ ಹೇಳಿಕೆ ನೀಡುವ ಮೂಲಕ ತನಗೆ ಮಾನ ಹಾನಿ ಉಂಟು ಮಾಡಿದ್ದಾರೆ. 2024 ಲೋಕಸಭೆ ಚುನಾವಣೆಯ ಸಂದರ್ಭ ತಿರುವನಂತಂತಪುರ ಕ್ಷೇತ್ರದಲ್ಲಿ ತಾನು ಮತದಾರರಿಗೆ ಲಂಚ ನೀಡಿದ್ದೇನೆ ಎಂದು ಅವರು ಪ್ರತಿಪಾದಿಸಿದ್ದರು ಎಂದು ಚಂದ್ರಶೇಖರ್ ಅವರು ದೂರಿನಲ್ಲಿ ಆರೋಪಿಸಿದ್ದರು.
ನ್ಯಾಯಾಲಯ ರಾಜೀವ್ ಚಂದ್ರಶೇಖರ್ ಅವರು ಸಲ್ಲಿಸಿದ ದೂರನ್ನು 2024 ಸೆಪ್ಟಂಬರ್ 21ರಂದು ಗಮನಕ್ಕೆ ತೆಗೆದುಕೊಂಡಿತ್ತು.