×
Ad

ದಿಲ್ಲಿ ಅಬಕಾರಿ ನೀತಿ ಪ್ರಕರಣ | ಚುನಾವಣಾ ಪ್ರಚಾರಕ್ಕೆ ಮಧ್ಯಂತರ ಜಾಮೀನು ಕೋರಿದ ಆಪ್ ನಾಯಕ ಮನೀಷ್ ಸಿಸೋಡಿಯಾ

Update: 2024-04-12 21:11 IST

ಮನೀಷ್ ಸಿಸೋಡಿಯಾ |PC : PTI 

ಹೊಸದಿಲ್ಲಿ: ಲೋಕಸಭಾ ಚುನಾವಣೆಗೆ ಪ್ರಚಾರ ನಡೆಸಲು ಮಧ್ಯಂತರ ಜಾಮೀನು ಕೋರಿ ದಿಲ್ಲಿ ಮದ್ಯ ನೀತಿ ಪ್ರಕರಣದಲ್ಲಿ ಬಂಧಿತರಾಗಿರುವ ಆಮ್ ಆದ್ಮಿ ಪಕ್ಷದ ನಾಯಕ ಮನೀಷ್ ಸಿಸೋಡಿಯಾ ಅವರು ಶುಕ್ರವಾರ ನಗರ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಸಿಸೋಡಿಯಾ ಅವರ ಅರ್ಜಿ ಕುರಿತು ನ್ಯಾಯಾಲಯ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಪ್ರತಿಕ್ರಿಯೆ ಕೋರಿದೆ. ಅಲ್ಲದೆ, ಪ್ರಕರಣದ ವಿಚಾರಣೆಯನ್ನು ಎಪ್ರಿಲ್ 20ಕ್ಕೆ ಮುಂದೂಡಿದೆ.

ದಿಲ್ಲಿಯಲ್ಲಿ ಲೋಕಸಭಾ ಚುನಾವಣೆ ಮೇ 25ರಂದು ಒಂದೇ ಹಂತದಲ್ಲಿ ನಡೆಯಲಿದೆ.

ಅಬಕಾರಿ ನೀತಿ ಪ್ರಕರಣದಲ್ಲಿ ‘‘ಪ್ರಮುಖ ಪಿತೂರಿಗಾರ’’ ಎಂದು ಹೆಸರಿಸಲಾದ ಸಿಸೋಡಿಯಾ ಅವರು ಸಿಬಿಐ 2023 ಫೆಬ್ರವರಿಯಲ್ಲಿ ಸಿಬಿಐಯಿಂದ ಬಂಧಿತರಾದ ಬಳಿಕ ಕಾರಾಗೃಹದಲ್ಲಿ ಇದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿ 2023 ಮಾರ್ಚ್ 9ರಂದು ಜಾರಿ ನಿರ್ದೇಶನಾಲಯ ಅವರನ್ನು ಬಂಧಿಸಿತ್ತು.

ದಿಲ್ಲಿ ನ್ಯಾಯಾಲಯ ಎಪ್ರಿಲ್ 6ರಂದು ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು ಎಪ್ರಿಲ್ 18ರ ವರೆಗೆ ವಿಸ್ತರಿಸಿತ್ತು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News