×
Ad

ದಿಲ್ಲಿ ಹೈಕೋರ್ಟ್‌ನಿಂದ ನಾಳೆ(ಡಿ.9) ಸರಕಾರದ ನೆರವು ಕೋರಿರುವ ಅರ್ಜಿಯ ವಿಚಾರಣೆ

Update: 2025-12-08 20:15 IST

    ದಿಲ್ಲಿ ಹೈಕೋರ್ಟ್‌ | Photo Credit : PTI 

ಹೊಸದಿಲ್ಲಿ: ಇಂಡಿಗೊ ವಿಮಾನಯಾನಗಳ ರದ್ದತಿಯಿಂದ ತೊಂದರೆಗೀಡಾಗಿರುವ ಪ್ರಯಾಣಿಕರಿಗೆ ನೆರವನ್ನು ಒದಗಿಸುವಂತೆ ಮತ್ತು ಹಣವನ್ನು ಮರುಪಾವತಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಡಿ.10ರಂದು ನಡೆಸಲಿದೆ.

ಸೋಮವಾರ ಮುಖ್ಯ ನ್ಯಾಯಾಧೀಶ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾ.ತುಷಾರ್ ರಾವ್ ಗಡೇಲಾ ಅವರ ಪೀಠದ ಮುಂದೆ ತುರ್ತು ವಿಚಾರಣೆಗಾಗಿ ಪಿಐಎಲ್‌ ನ್ನು ಉಲ್ಲೇಖಿಸಿದ ಅರ್ಜಿದಾರರ ಪರ ವಕೀಲರು,‘ಹಲವಾರು ಜನರು ಅತಂತ್ರರಾಗಿದ್ದಾರೆ. ವಿಮಾನ ನಿಲ್ದಾಣಗಳಲ್ಲಿ ಪರಿಸ್ಥಿತಿ ಅಮಾನವೀಯವಾಗಿದೆ. ಅವುಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಜನರಿಗೆ ನೆರವಾಗುವಂತೆ ಇಂಡಿಗೊ ಮತ್ತು ಅದರ ಸಿಬ್ಬಂದಿಗಳಿಗೆ ಈ ನ್ಯಾಯಾಲಯವು ಆದೇಶಿಸುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ. ಹಣದ ಮರುಪಾವತಿಗೆ ಯಾವುದೇ ಸೂಕ್ತವಾದ ವ್ಯವಸ್ಥೆಯಿಲ್ಲ’ ಎಂದು ಹೇಳಿದರು.

ಈ ವಿಷಯದಲ್ಲಿ ಸರಕಾರವು ಈಗಾಗಲೇ ಕೆಲವು ನಿರ್ದೇಶನಗಳನ್ನು ಹೊರಡಿಸಿದೆ ಎಂದು ಹೇಳಿದ ಪೀಠವು, ಅರ್ಜಿಯ ವಿಚಾರಣೆಯನ್ನು ಡಿ.10ರಂದು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News