×
Ad

ಹೈದರಾಬಾದ್‌ ಗೆ ಬರುತ್ತಿದ್ದ ಮೂರು ವಿಮಾನಗಳಿಗೆ ಬಾಂಬ್ ಬೆದರಿಕೆ

Update: 2025-12-08 21:08 IST

Photo Credit : X

ಹೈದರಾಬಾದ್,ಡಿ.8: ಎರಡು ಅಂತರರಾಷ್ಟ್ರೀಯ ಯಾನಗಳು ಸೇರಿದಂತೆ ವಿವಿಧ ನಗರಗಳಿಂದ ಬರುತ್ತಿದ್ದ ಮೂರು ವಿಮಾನ ಯಾನಗಳಿಗೆ ಬಾಂಬ್ ಬೆದರಿಕೆಗಳನ್ನು ಇಲ್ಲಿಯ ರಾಜೀವ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು (ಆರ್‌ಜಿಐಎ) ಸ್ವೀಕರಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ರವಿವಾರ ತಡರಾತ್ರಿ ಹೀಥ್ರೋದಿಂದ ಬರುತ್ತಿದ್ದ ಬ್ರಿಟಿಷ್ ಏರ್‌ವೇಸ್,ಫ್ರಾಂಕ್‌ಫರ್ಟ್‌ನಿಂದ ಬರುತ್ತಿದ್ದ ಲುಫ್ತಾನ್ಸಾ ಮತ್ತು ಕಣ್ಣೂರಿನಿಂದ ಬರುತ್ತಿದ್ದ ಇಂಡಿಗೋ ವಿಮಾನಗಳನ್ನು ಗುರಿಯಾಗಿಸಿಕೊಂಡು ಬೆದರಿಕೆ ಇಮೇಲ್‌ಗಳು ಬಂದಿದ್ದವು.

ಎಲ್ಲ ವಿಮಾನಗಳು ಸುರಕ್ಷಿತವಾಗಿ ಇಳಿದಿವೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿದವು. ಎರಡು ಅಂತರರಾಷ್ಟ್ರೀಯ ವಿಮಾನಗಳು ಸೋಮವಾರ ಬೆಳಗಿನ ಜಾವ ಇಲ್ಲಿಗೆ ಬಂದಿಳಿದವು.

ಎಲ್ಲ ವಿಮಾನಗಳನ್ನು ಸುರಕ್ಷತಾ ತಪಾಸಣೆಗಳಿಗೆ ಒಳಪಡಿಸಲಾಗಿದ್ದು, ಯಾವುದೇ ಶಂಕಾಸ್ಪದ ವಸ್ತು ಪತ್ತೆಯಾಗಿಲ್ಲ.

ಕಳೆದ ವಾರ ದುಬೈ-ಹೈದರಾಬಾದ್ ಎಮಿರೇಟ್ಸ್ ಮತ್ತು ಇಂಡಿಗೊದ ಮದೀನಾ-ಹೈದರಾಬಾದ್ ಹಾಗೂ ಶಾರ್ಜಾ-ಹೈದರಾಬಾದ್ ವಿಮಾನಗಳನ್ನು ಗುರಿಯಾಗಿಸಿಕೊಂಡು ಮೂರು ಪ್ರತ್ಯೇಕ ಬೆದರಿಕೆ ಇಮೇಲ್‌ಗಳು ಆರ್‌ಜಿಐಎಗೆ ಬಂದಿದ್ದವು.

ಮದೀನಾ-ಹೈದರಾಬಾದ್ ವಿಮಾನವನ್ನು ಅಹ್ಮದಾಬಾದ್‌ ಗೆ ತಿರುಗಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News