ಸಂಸತ್ ಭದ್ರತಾ ಉಲ್ಲಂಘನೆ ಆರೋಪಿ ನೀಲಂ ಅಝಾದ್ ಅರ್ಜಿಯ ತುರ್ತು ವಿಚಾರಣೆಗೆ ದಿಲ್ಲಿ ಹೈಕೋರ್ಟ್ ನಿರಾಕರಣೆ
ನೀಲಂ ಅಝಾದ್ | Photo: PTI
ಹೊಸದಿಲ್ಲಿ: ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣದ ಆರೋಪಿಯಾಗಿರುವ ನೀಲಂ ಅಝಾದ್ ತನ್ನ ಪೊಲೀಸ್ ಕಸ್ಟಡಿ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆ ನಡೆಸಲು ದಿಲ್ಲಿ ಉಚ್ಚ ನ್ಯಾಯಾಲಯ ಗುರುವಾರ ನಿರಾಕರಿಸಿದೆ.
ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ನೇತೃತ್ವದ ಹಾಗೂ ನ್ಯಾಯಮೂರ್ತಿ ಶೈಲೇಂದ್ರ ಕೌಲ್ ಅವರನ್ನು ಒಳಗೊಂಡ ದಿಲ್ಲಿ ಉಚ್ಚ ನ್ಯಾಯಾಲಯದ ರಜಾಕಾಲದ ಪೀಠ ನೀಲಂ ಅಝಾದ್ ಅವರ ಅರ್ಜಿಯ ತುರ್ತು ವಿಚಾರಣೆ ನಡೆಸಲು ನಿರಾಕರಿಸಿತು.
ವಿಚಾರಣಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಸಂದರ್ಭ ವಕೀಲರನ್ನು ಸಂಪರ್ಕಿಸಲು ತನಗೆ ಸೂಕ್ತ ಕಾನೂನು ಅವಕಾಶ ನೀಡಿಲ್ಲ ಎಂಬ ನೆಲೆಯಲ್ಲಿ ಆರೋಪಿ ನೀಲಂ ರಜಾಕಾಲದ ಪೀಠದ ಮುಂದೆ ಅರ್ಜಿ ಸಲ್ಲಿಸಿದ್ದರು.
ಆರೋಪಿ ಪರವಾಗಿ ವಕೀಲ ಸುರೇಶ್ ಕುಮಾರ್ ಚೌಧರಿ ಅವರು ಹಾಜರಾಗಿದ್ದರು ಹಾಗೂ ಅರ್ಜಿಯನ್ನು ರಜಾಕಾಲದ ಪೀಠದ ಮುಂದೆ ಪ್ರಸ್ತಾವಿಸಿದರು.
ಆದರೆ, ಪ್ರಕರಣದ ತುರ್ತು ವಿಚಾರಣೆ ನಡೆಸಲು ಪೀಠ ನಿರಾಕರಿಸಿತು ಹಾಗೂ ಅರ್ಜಿಯ ವಿಚಾರಣೆ ಜನವರಿ 3ರಂದು ನಡೆಯಲಿದೆ ಎಂದು ಹೇಳಿತು.