ದಿಲ್ಲಿಯನ್ನು 'ಇಂದ್ರಪ್ರಸ್ಥ' ಎಂದು ಮರುನಾಮಕರಣ ಮಾಡುವಂತೆ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದ ಬಿಜೆಪಿ ಸಂಸದ
Update: 2025-11-01 11:46 IST
ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್ (Photo credit: NDTV)
ಹೊಸದಿಲ್ಲಿ: ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್ ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು, ದಿಲ್ಲಿಯನ್ನು 'ಇಂದ್ರಪ್ರಸ್ಥ' ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಹಳೆ ದಿಲ್ಲಿ ರೈಲು ನಿಲ್ದಾಣವನ್ನು 'ಇಂದ್ರಪ್ರಸ್ಥ ಜಂಕ್ಷನ್' ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು 'ಇಂದ್ರಪ್ರಸ್ಥ ವಿಮಾನ ನಿಲ್ದಾಣ' ಎಂದು ಮರುನಾಮಕರಣ ಮಾಡುವಂತೆ ಅವರು ಒತ್ತಾಯಿಸಿದರು.
"ದಿಲ್ಲಿಯ ಇತಿಹಾಸ ಸಾವಿರಾರು ವರ್ಷಗಳ ಹಿಂದಿನದು ಮಾತ್ರವಲ್ಲದೆ, ಭಾರತೀಯ ನಾಗರಿಕತೆಯ ಆತ್ಮವನ್ನು ಪ್ರತಿಬಿಂಬಿಸುತ್ತದೆ ಮತ್ತು ಪಾಂಡವರು ಸ್ಥಾಪಿಸಿದ ಇಂದ್ರಪ್ರಸ್ಥ ನಗರದ ಪರಂಪರೆಯನ್ನು ಒಳಗೊಂಡಿದೆ. ರಾಷ್ಟ್ರ ರಾಜಧಾನಿಯಲ್ಲಿ ಪಾಂಡವರ ಭವ್ಯ ಪ್ರತಿಮೆಗಳನ್ನು ಸ್ಥಾಪಿಸಬೇಕು” ಎಂದು ಪ್ರವೀಣ್ ಖಂಡೇಲ್ವಾಲ್ ಪತ್ರದಲ್ಲಿ ಆಗ್ರಹಿಸಿದ್ದಾರೆ.