×
Ad

ದಿಲ್ಲಿ ಭಯೋತ್ಪಾದಕ ದಾಳಿ | ಉಮರ್ ಉನ್ ನಬಿಗೆ ನೆರವಾಗಿದ್ದ ವ್ಯಕ್ತಿಯನ್ನು ಬಂಧಿಸಿದ NIA

ಬಂಧಿತರ ಸಂಖ್ಯೆ ಏಳಕ್ಕೇರಿಕೆ

Update: 2025-11-26 20:51 IST

ಉಮರ್ ಉನ್ ನಬಿ | Photo Credit : timesofindia.indiatimes.com

ಹೊಸದಿಲ್ಲಿ,ನ.26: ದಿಲ್ಲಿ ಬಾಂಬ್ ಸ್ಫೋಟಕ್ಕೆ ಮುನ್ನ ಭಯೋತ್ಪಾದಕ ಉಮರ್ ಉನ್ ನಬಿಗೆ ಆಶ್ರಯ ನೀಡಿದ್ದಕ್ಕಾಗಿ ಹರ್ಯಾಣದ ಫರೀದಾಬಾದ್‌ನ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು (NIA) ಬಂಧಿಸಿದೆ.

ಫರೀದಾಬಾದ್‌ನ ಧೌಜ್ ನಿವಾಸಿ ಸೋಯಬ್ ಪ್ರಕರಣದಲ್ಲಿ ಬಂಧಿತ ಏಳನೇ ಆರೋಪಿಯಾಗಿದ್ದಾನೆ.

ಸೋಯಬ್ ಬಾಂಬ್ ಸ್ಫೋಟಕ್ಕೆ ಮುನ್ನ ಉಮರ್‌ ಗೆ ಲಾಜಿಸ್ಟಿಕ್ ಬೆಂಬಲವನ್ನೂ ಒದಗಿಸಿದ್ದ ಎನ್ನುವುದನ್ನು NIA ತನಿಖೆಗಳು ಬಹಿರಂಗಗೊಳಿಸಿವೆ.

ನ.10ರಂದು ದಿಲ್ಲಿಯ ಕೆಂಪುಕೋಟೆ ಬಳಿ ಕಾರ್ ಬಾಂಬ್ ಸ್ಫೋಟಿಸಿದ ಪರಿಣಾಮ 13 ಜನರು ಮೃತಪಟ್ಟು, ಹಲವರು ಗಾಯಗೊಂಡಿದ್ದರು.

NIA ಈಗಾಗಲೇ ಉಮರ್‌ ನ ಇತರ ಆರು ಪ್ರಮುಖ ಸಹಾಯಕರನ್ನು ಬಂಧಿಸಿದೆ.

ಆತ್ನಹತ್ಯಾ ಬಾಂಬ್ ದಾಳಿಗೆ ಸಂಬಂಧಿಸಿದಂತೆ ವಿವಿಧ ಸುಳಿವುಗಳ ಬೆನ್ನು ಬೆದ್ದಿರುವ NIA ಭಯೋತ್ಪಾದಕ ದಾಳಿಯಲ್ಲಿ ಪಾಲ್ಗೊಂಡಿದ್ದ ಇತರರನ್ನು ಪತ್ತೆ ಹಚ್ಚಲು ವಿವಿಧ ರಾಜ್ಯಗಳಲ್ಲಿ ಸ್ಥಳೀಯ ಪೋಲಿಸ್ ಪಡೆಗಳ ಸಹಕಾರದೊಂದಿಗೆ ಶೋಧ ಕಾರ್ಯಾಚರಣೆಗಳನ್ನು ನಡೆಸುತ್ತಿದೆ.

ಈ ಮಾರಣಾಂತಿಕ ಭಯೋತ್ಪಾದಕ ದಾಳಿಯ ಇಡೀ ಸಂಚನ್ನು ಬಯಲಿಗೆಳೆಯಲು ಪ್ರಯತ್ನಗಳು ಮುಂದುವರಿದಿವೆ ಎಂದು NIA ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News