×
Ad

ದಿಲ್ಲಿಯಲ್ಲಿ ದಟ್ಟ ಮಂಜು: 148 ವಿಮಾನಗಳ ಹಾರಾಟ ರದ್ದು

Update: 2025-12-31 11:38 IST

ಸಾಂದರ್ಭಿಕ ಚಿತ್ರ | Photo Credit : freepik

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಾದ್ಯಂತ ದಟ್ಟ ಮಂಜು ಆವರಿಸಿರುವುದರಿಂದ ಬುಧವಾರ 148 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.

ರದ್ದುಗೊಂಡ ವಿಮಾನಗಳ ಪೈಕಿ 70 ನಿರ್ಗಮನ ವಿಮಾನಗಳು ಹಾಗೂ 78 ಆಗಮನ ವಿಮಾನಗಳು ಸೇರಿವೆ. ಈ ನಡುವೆ ದಿಲ್ಲಿಯಲ್ಲಿ ಕಳಪೆ ವಾಯು ಗುಣಮಟ್ಟ ಮುಂದುವರಿದಿದ್ದು, ಇದರಿಂದ ದಿಲ್ಲಿ ಎನ್‌ಸಿಆರ್ ಪ್ರದೇಶದ ನಿವಾಸಿಗಳಿಗೆ ಗಂಭೀರ ಸವಾಲು ಎದುರಾಗಿದೆ.

ಭಾರತೀಯ ಹವಾಮಾನ ಇಲಾಖೆಯು ದಿಲ್ಲಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಮಂಗಳವಾರಕ್ಕೆ ಹೋಲಿಕೆ ಮಾಡಿದರೆ ಬುಧವಾರ ದಿಲ್ಲಿಯಲ್ಲಿ ಅಧಿಕ ಪ್ರಮಾಣದ ದಟ್ಟ ಮಂಜು ಆವರಿಸಿದೆ. ಇದರಿಂದ ದಿಲ್ಲಿಯ ವಿವಿಧ ಪ್ರದೇಶಗಳಲ್ಲಿ ಗೋಚರತೆಯ ಪ್ರಮಾಣ ತೀವ್ರ ಸ್ವರೂಪದಲ್ಲಿ ಕ್ಷೀಣಿಸಿದೆ.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News