×
Ad

ಉತ್ತರ ಪ್ರದೇಶ: ಗೋಡೆ ಹತ್ತಿ ಪಾಳುಬಿದ್ದ ಕಟ್ಟಡದಿಂದ ಗಾಯಗೊಂಡ ಶಿಶುವನ್ನು ರಕ್ಷಿಸಿದ ನಟಿ ದಿಶಾ ಪಟಾನಿ ಸಹೋದರಿ

Update: 2025-04-21 14:55 IST

Screengrab from the video | PC: @khushboo_patani/Instagram

ಬರೇಲಿ (ಉತ್ತರ ಪ್ರದೇಶ): ಬಾಲಿವುಡ್ ನಟಿ ದಿಶಾ ಪಟಾನಿ ಅವರ ಸಹೋದರಿ ಖುಷ್ಬೂ ಪಟಾನಿ ರವಿವಾರ ಬೆಳಿಗ್ಗೆ ಇಲ್ಲಿ ಪಾಳುಬಿದ್ದ ಕಟ್ಟಡದಿಂದ ಸುಮಾರು 9 ರಿಂದ 10 ತಿಂಗಳ ವಯಸ್ಸಿನ ಅನಾಥ ಶಿಶುವನ್ನು ಗೋಡೆ ಹತ್ತಿ ರಕ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಿಶಾ ಅವರ ಬರೇಲಿಯ ನಿವಾಸದ ಬಳಿ ಮಗು ಪತ್ತೆಯಾಗಿದೆ. ಅಲ್ಲಿ ಖುಶ್ಬೂ ತಮ್ಮ ತಂದೆ ನಿವೃತ್ತ ಪೊಲೀಸ್ ವೃತ್ತ ಅಧಿಕಾರಿ ಜಗದೀಶ್ ಪಟಾನಿ ವಾಸಿಸುತ್ತಿದ್ದಾರೆ. ಖುಷ್ಬೂ ಅವರ ಧೈರ್ಯಶಾಲಿ ನಡೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ಖುಷ್ಬೂ ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದಾಗ ಹತ್ತಿರದ ಪಾಳುಬಿದ್ದ ಕಟ್ಟಡದಿಂದ ಮಗುವಿನ ಅಳುವ ಶಬ್ದ ಕೇಳಿಸಿತು.ಆ ಕಟ್ಟಡಕ್ಕೆ ನೇರ ಪ್ರವೇಶವಿರಲಿಲ್ಲ. ಆದ್ದರಿಂದ ಅವರು ಧೈರ್ಯದಿಂದ ಗೋಡೆ ಹತ್ತಿ ಸ್ಥಳಕ್ಕೆ ತಲುಪಿದರು. ಒಳಗೆ ಒಂದು ಶಿಶು ನೆಲದ ಮೇಲೆ ಬಿದ್ದಿದ್ದು, ಅಳುತ್ತಿತ್ತು. ಮಗುವಿನ ಮುಖದ ಮೇಲೆ ಗಾಯಗಳಿತ್ತು", ಎಂದು ನಗರ 1 ವಿಭಾಗದ ವೃತ್ತ ಅಧಿಕಾರಿ ಪಂಕಜ್ ಶ್ರೀವಾಸ್ತವ ಹೇಳಿದ್ದಾರೆ.

ಖುಷ್ಬೂ ಅವರು ಮಗುವನ್ನು ತಕ್ಷಣ ಶಿಶುವನ್ನು ಮನೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿದರು ಎಂದು ತಿಳಿದುಬಂದಿದೆ.

ನಂತರ ಅವರ ಕುಟುಂಬವು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿತು. ಬಳಿಕ ಮಗುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗುವನ್ನು ಎಸೆದು ಹೋಗಿದ್ದಾರೆ ಎಂಬುದನ್ನು ಗುರುತಿಸಲು ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಪ್ರಾರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News