×
Ad

ಸೇನೆಯನ್ನು ವರ್ಗಗಳಾಗಿ ವಿಭಜಿಸಬೇಡಿ: ಕೀರ್ತಿಚಕ್ರ ಪುರಸ್ಕೃತ ಯೋಧನ ತಾಯಿ ಮನವಿ

Update: 2024-07-10 14:10 IST
Photo:X/ANI

ರಾಯಬರೇಲಿ: ಕಾಂಗ್ರೆಸ್ ಮುಖಂಡ ರಾಹುಲ್‍ ಗಾಂಧಿ ಮಂಗಳವಾರ ಕೀರ್ತಿಚಕ್ರ ಪುರಸ್ಕೃತ ಕ್ಯಾಪ್ಟನ್ ಅಂಶುಮನ್ ಸಿಂಗ್ ಅವರ ತಾಯಿಯನ್ನು ಭೇಟಿ ಮಾಡಿದರು. ಭೇಟಿಯ ಬಳಿಕ ಮಾತನಾಡಿದ ಸಿಂಗ್ ಅವರ ತಾಯಿ ಅಗ್ನಿಪಥ್ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದರು. ಸೇನೆಯನ್ನು ಎರಡು ವಿಭಾಗಗಳಾಗಿ ವಿಂಗಡಿಸಬೇಡಿ ಎಂದು ಅವರು ಸರ್ಕಾರವನ್ನು ಮನವಿ ಮಾಡಿದರು.

ಅಗ್ನಿಪಥ್ ಯೋಜನೆಯನ್ನು ಕಾಂಗ್ರೆಸ್ ಮುಖಂಡ ರಾಹುಲ್‍ ಗಾಂಧಿ ವಿರೋಧಿಸುತ್ತಲೇ ಬಂದಿದ್ದು, ಮೃತ ಅಗ್ನಿವೀರರ ಕುಟುಂಬಗಳಿಗೆ ನೀಡಲಾದ ಪರಿಹಾರಧನಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಸುಳ್ಳು ಹೇಳಿದ್ದಾಗಿ ಆಪಾದಿಸಿದ್ದರು.

ಸೇನೆಯನ್ನು ಎರಡು ವರ್ಗಗಳಾಗಿ ವಿಭಜಿಸಬೇಡಿ ಎಂದು ನಾನು ಸರ್ಕಾರವನ್ನು ಒತ್ತಾಯಿಸುತ್ತಿದ್ದೇನೆ ಎಂದು ಮೃತ ಕ್ಯಾಪ್ಟನ್ ತಾಯಿ ಮಂಜು ಸಿಂಗ್, ರಾಹುಲ್‍‌ ಗಾಂಧಿಯವರನ್ನು ಭೇಟಿ ಮಾಡಿದ ಬಳಿಕ ಮಾತನಾಡುವ ವೇಳೆ ಸ್ಪಷ್ಟಪಡಿಸಿದರು.

ನಾಲ್ಕು ವರ್ಷಗಳ ಉದ್ಯೋಗ ಪಾತ್ರ ಅಗ್ನಿವೀರರಿಗೆ ಸಮರ್ಪಕವಲ್ಲ. ಏಕೆಂದರೆ ನಾಲ್ಕು ವರ್ಷದ ಬಳಿಕ ಸೂಕ್ತ ಉದ್ಯೋಗ ಪಡೆಯಲು ಅವರು ಪರದಾಡಬೇಕಾಗುತ್ತದೆ ಎಂದು ಅವರು ವಿವರಿಸಿದರು.

ನಾಲ್ಕು ವರ್ಷದ ಬಳಿಕ ಅವರು ದೈಹಿಕ ಹಾಗೂ ಮಾನಸಿಕವಾಗಿ ಕುಗ್ಗುತ್ತಾರೆ. ಆ ಬಳಿಕ ಓದನ್ನು ಮುಂದುವರಿಸುವುದು ಕೂಡಾ ಸಾಧ್ಯವಿಲ್ಲ. ಇದು ಒಳ್ಳೆಯದಲ್ಲ ಎಂದು ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News