×
Ad

ಅಸ್ಸಾಂ | 45 ಕೋಟಿ ರೂ. ಮೌಲ್ಯದ ಯಾಬಾ ಮಾತ್ರೆಗಳು ವಶ : ನಾಲ್ವರ ಬಂಧನ

Update: 2025-06-10 10:21 IST

Photo | NDTV

ಗುವಾಹಟಿ: ಅಸ್ಸಾಂನ ಕ್ಯಾಚರ್ ಜಿಲ್ಲೆಯಲ್ಲಿ ಬರೊಬ್ಬರಿ 45 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ.

ಈ ಕುರಿತು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಗುಪ್ತಚರ ಮಾಹಿತಿಯ ಆಧಾರದ ಮೇಲೆ ನಡೆಸಿದ ಸತತ ಎರಡು ದಾಳಿಗಳಲ್ಲಿ ಒಟ್ಟು 1.5 ಲಕ್ಷ ಯಾಬಾ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ವೇಳೆ ನಾಲ್ವರನ್ನು ಬಂಧಿಸಲಾಗಿದೆ. ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಹೋರಾಡುವಲ್ಲಿ ಮತ್ತು ಯುವಕರನ್ನು ರಕ್ಷಿಸುವಲ್ಲಿ ಅಸ್ಸಾಂ ಪೊಲೀಸರ ದೃಢ ನಿಲುವನ್ನು ಅವರು ಶ್ಲಾಘಿಸಿದ್ದಾರೆ.

ಯಾಬಾ ಎಂಬುದು ಮೆಟಾಂಫೆಟಮೈನ್ ಮತ್ತು ಕೆಫೇನ್‌ನ ಮಿಶ್ರಣ ಹೊಂದಿದ್ದು, ಉತ್ತೇಜಕ ಮತ್ತು ವ್ಯಸನಕಾರಿ ಮಾತ್ರೆಯಾಗಿದೆ. ಇದನ್ನು ಭಾರತದಲ್ಲಿ ನಿಷೇಧಿಸಲಾಗಿದೆ.

ಇದಕ್ಕೂ ಮೊದಲು, ಮಣಿಪುರ ಮತ್ತು ಮಿಜೋರಾಂನಲ್ಲಿ ಭದ್ರತಾ ಪಡೆಗಳು 5.7 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಮಾದಕ ವಸ್ತುಗಳನ್ನು ವಶಡಿಸಿಕೊಂಡಿದ್ದಾರೆ ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News