×
Ad

ಕುಡಿದ ಮತ್ತಿನಲ್ಲಿ ಪತ್ನಿಯನ್ನು ಮೂರನೇ ಮಹಡಿಯಿಂದ ಎಸೆದ ಪತಿ!

Update: 2024-01-28 09:28 IST

ಗಾಝಿಯಾಬಾದ್‌ : ಕುಡಿದ ಮತ್ತಿನಲ್ಲಿ ಪತ್ನಿಯೊಂದಿಗೆ ಜಗಳವಾಡಿದ ಪತಿ, ಆಕೆಯನ್ನು ಮೂರನೇ ಮಹಡಿಯಿಂದ ಕೆಳಗೆಸೆದ ಕಾರಣ, ಪತ್ನಿ ಮೃತಪಟ್ಟ ಘಟನೆ ಉತ್ತರಪ್ರದೇಶದ ಗಾಝಿಯಾಬಾದ್‌ ನಲ್ಲಿ ನಡೆದಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪೊಲೀಸರ ಪ್ರಕಾರ ಗೋವಿಂದಪುರಂ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಆರೋಪಿ ವಿಕಾಸ್ ಕುಮಾರ್ ನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಪಾರ್ಕಿಂಗ್ ಗುತ್ತಿಗೆದಾರರಾದ ವಿಕಾಸ್ ಕುಮಾರ್ ಮದ್ಯದ ಅಮಲಿನಲ್ಲಿ ಮನೆಗೆ ಬಂದು, 30 ರ ಹರೆಯದ ತನ್ನ ಪತ್ನಿ ಶಾಲು ಎಂಬಾಕೆಯ  ಜೊತೆ ತೀವ್ರ ಜಗಳವಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.

"ಜಗಳದ ನಂತರ ಪತ್ನಿ ಶಾಲುವನ್ನು ಮೂರನೇ ಮಹಡಿಯಿಂದ ಎಸೆದ ವಿಕಾಸ್‌ ಕುಮಾರ್, ತೀವ್ರ ಗಾಯಗೊಂಡ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದನು. ಅಲ್ಲಿ ವೈದ್ಯರು ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಿದರು" ಎಂದು ಸಹಾಯಕ ಪೊಲೀಸ್ ಕಮಿಷನರ್ ಅಭಿಷೇಕ್ ಶ್ರೀವಾಸ್ತವ್ ಹೇಳಿದರು.

ಪೊಲೀಸರಿಗೆ ಮಾಹಿತಿ ನೀಡುವಂತೆ ವೈದ್ಯರು ಸಿಬ್ಬಂದಿಗೆ ಸೂಚಿಸಿದಾಗ ವಿಕಾಸ್ ಕುಮಾರ್ ಆಸ್ಪತ್ರೆಯಿಂದ ಪರಾರಿಯಾದನು ಎಂದು ವರದಿಯಾಗಿದೆ. ಕೆಲವು ಗಂಟೆಗಳ ನಂತರ ಆತನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

"ನಾವು ಆರೋಪಿ ಪತಿ ವಿಕಾಸ್ ಕುಮಾರ್ ವಿರುದ್ಧ ಕೊಲೆ ಆರೋಪದಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ. ಶನಿವಾರ ಆತನನ್ನು ಜೈಲಿಗೆ ಕಳುಹಿಸಲಾಗಿದೆ" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News