×
Ad

ದುಬೈ | ಕೇರಳದ ಇಬ್ಬರಿಗೆ ಮರಣದಂಡನೆ : ವಿದೇಶಾಂಗ ಸಚಿವಾಲಯ

Update: 2025-03-05 22:39 IST

ಸಾಂದರ್ಭಿಕ ಚಿತ್ರ | PC: freepik.com

ಅಬುಧಾಬಿ: ದುಬೈನಲ್ಲಿ ಕೇರಳದ ಇಬ್ಬರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಈ ಕುರಿತು ಅವರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಗಲ್ಲುಶಿಕ್ಷೆಗೊಳಗಾದವರನ್ನು ಮುಹಮ್ಮದ್ ರಿನಾಶ್ ಎ ಮತ್ತು ಮುರಳೀಧರನ್ ಪಿವಿ ಎಂದು ಗುರುತಿಸಲಾಗಿದೆ. ಈ ಕುರಿತು ಯುಎಇ ಸರಕಾರವು ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ನೀಡಿದೆ ಎಂದು ತಿಳಿದು ಬಂದಿದೆ.

ಕುಟುಂಬದವರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಅವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ವ್ಯವಸ್ಥೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯವು ತಿಳಿಸಿದೆ. ಕೊಲೆ ಪ್ರಕರಣರಲ್ಲಿ ಇಬ್ಬರಿಗೂ ಮರಣದಂಡನೆ ವಿಧಿಸಲಾಗಿದೆ.

ಮುಹಮ್ಮದ್ ರಿನಾಶ್ ವಿರುದ್ಧ ಯುಎಇ ಪ್ರಜೆಯ ಕೊಲೆ ಪ್ರಕರಣ ದಾಖಲಾಗಿತ್ತು. ಮುರಳೀಧರನ್ ಭಾರತೀಯ ನಾಗರಿಕನ ಕೊಲೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದರು. ವಿದೇಶಾಂಗ ಸಚಿವಾಲಯವು ಆರೋಪಿಗಳಿಗೆ ಎಲ್ಲಾ ಸಂಭಾವ್ಯ ಕಾನೂನು ಸಹಾಯವನ್ನು ಒದಗಿಸಿತ್ತು ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News